- Advertisement -
- Advertisement -

ಮಣಿಪಾಲ: ಹೋಟೆಲ್ ಕಾರ್ಮಿಕರೊಬ್ಬರನ್ನು ಬಿಯರ್ ಬಾಟಲಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಮಣಿಪಾಲ ಈಶ್ವರನಗರ ಸಮೀಪ ನಡೆದಿದೆ.
ಮೃತಪಟ್ಟ ಹೋಟೆಲ್ ಕಾರ್ಮಿಕನನ್ನು ಹೊನ್ನಾವರ ಕಾಸರಗೋಡಿನ ಶ್ರೀಧರ್ ನಾಯಕ(35) ಎಂದು ಗುರುತಿಸಲಾಗಿದೆ.
ಇವರು ಮಣಿಪಾಲದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು ಇವರ ಕುತ್ತಿಗೆಯನ್ನು ಬಿಯರ್ ಬಾಟಲಿಯಿಂದ ಕೊಯ್ದು ಹತ್ಯೆ ಮಾಡಿರುವುದು ತಿಳಿದುಬಂದಿದೆ. ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಯಾರು ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -








