Thursday, July 30, 2026
spot_imgspot_img
spot_imgspot_img

ಲಾರಿ ಪಲ್ಟಿ; ಲೋಕೋಪಯೋಗಿ ಇಲಾಖೆಯ ಮೂವರು ಅಧಿಕಾರಿಗಳು ಮೃತ್ಯು

- Advertisement -
- Advertisement -

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರಿನ ಡಾಲರ್ಸ್ ಕಾಲನಿಯಲ್ಲಿ ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಲೋಕೋಪಯೋಗಿ ಇಲಾಖೆಯ ಮೂವರು ಅಧಿಕಾರಿಗಳು ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ಅಧಿಕಾರಿಗಳು ಮಲ್ಲಿಕಾರ್ಜುನ (29), ಶಿವರಾಜು (28), ಮೆಹಬೂಬ್ (30) ಎಂದು ತಿಳಿದು ಬಂದಿದೆ.ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯ‌ರ್ ಇಂಜಿನಿಯರ್‌ಗಳಾಗಿದ್ದ ಮಲ್ಲಿಕಾರ್ಜುನ, ಶಿವರಾಜು ಮತ್ತು ಕಂಪ್ಯೂಟರ್ ಆಪರೇಟರ್ ಆಗಿದ್ದ ಮೆಹಬೂಬ್ ಸೋಮವಾರ ರಾತ್ರಿ ಕೆನಲ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು.ರಸ್ತೆ ಬದಿ ಮೂವರು ಮಾತಾಡುತ್ತ ನಿಂತಿದ್ದರು. ಅದೇ ಮಾರ್ಗವಾಗಿ ಬಂದ ಹೊಟ್ಟು ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಮೂವರು ಅಧಿಕಾರಿಗಳ ಮೇಲೆ ಬಿದ್ದಿದೆ. ಲಾರಿ ಕೆಳಗೆ ಸಿಲುಕಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಈ ಕುರಿತು ಸಿಂಧನೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸಂಬಂಧ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!