- Advertisement -
- Advertisement -





ಬಂಟ್ವಾಳ: ವ್ಯಕ್ತಿಯೋರ್ವರು ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ನ್ನು ಕಳ್ಳತನ ಮಾಡಿರುವ ಘಟನೆ ಬಿ.ಸಿ ರೋಡ್ನಲ್ಲಿ ನಡೆದಿದೆ.
ಡಿ.24 ರಂದು ಸಂಜೆ 6.00 ಗಂಟೆಗೆ ಮಂಗಳೂರು ತಾಲೂಕಿನ ಎಲ್ಯಾರ್ ಗುಡ್ಡೆ ನಿವಾಸಿ ಸಿದ್ದೀಕ್ ಎಂಬವರು ತಮ್ಮ ಬುಲೆಟ್ ಬೈಕ್ನ್ನು ಬಿ.ಸಿ ರೋಡಿನ ಕುಲಾಲ್ ಭವನಕ್ಕೆ ಹೋಗುವ ದಾರಿಯ ಬದಿಯಲ್ಲಿರುವ ಗ್ಯಾರೇಜ್ನ ಪಕ್ಕದಲ್ಲಿ ನಿಲ್ಲಿಸಿ ಬಸ್ ಮೂಲಕ ಮಾಣಿಗೆ ತೆರಳಿದ್ದರು. ವಾಪಸು ಬಂದು ನೋಡಿದಾಗ ಬೈಕ್ ಕಳವಾಗಿರುವುದು ಗಮನಕ್ಕೆ ಬಂದಿದೆ.
ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
- Advertisement -