Friday, August 7, 2026
spot_imgspot_img
spot_imgspot_img

ಬಂಟ್ವಾಳ: (ಜ.16) 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪೂರೈಸಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ನೋಂದಾವಣೆ ಶಿಬಿರ

- Advertisement -
- Advertisement -

ಬಂಟ್ವಾಳ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪೂರೈಸಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ನೋಂದಾವಣೆ ಶಿಬಿರ ಜ.16 ನೇ ಗುರುವಾರ ಬೆಳಿಗ್ಗೆ 10:00 ರಿಂದ 2:00ರವರೆಗೆ ತಾಲೂಕು ಪಂಚಾಯತ್ SGSY ಸಭಾಂಗಣದಲ್ಲಿ ನಡೆಯಲಿದೆ. ಆದ್ದರಿಂದ ನಿರುದ್ಯೋಗಿ ಯುವಕ-ಯುವತಿಯರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1) ಶಿಬಿರ : ಈಗಾಗಲೇ ತಾಲೂಕಿನಲ್ಲಿ ಹಮ್ಮಿಕೊಂಡಿರುವ ಯೋಜನೆಯ ಶಿಬಿರಗಳು ಯಶಸ್ವಿಯಾಗಿದ್ದು ರಾಜ್ಯ ಮಟ್ಟದಲ್ಲೂ ಬಂಟ್ವಾಳ ತಾಲೂಕು ಗುರುತಿಸುವಂತಾಗಿದೆ.

2) ಶಕ್ತಿ ಯೋಜನೆ: ಬೆಳಿಗ್ಗೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಧರ್ಮಸ್ಥಳ – ಮಂಗಳೂರು, ಉಪ್ಪಿನಂಗಡಿ- ಮಂಗಳೂರು ಬಸ್‌ಗಳು ನಿಗದಿತ ಬಸ್ಸು ತಂಗುದಾಣಗಳಲ್ಲಿ ಬಸ್‌ ನಿಲುಗಡೆಗೊಳಿಸದೇ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನಲೆಯಲ್ಲಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವಿಭಾಗೀಯ ನಿಯಂತ್ರಕರು ಮಂಗಳೂರು ಉಪ ವಿಭಾಗದ ಅಧಿಕಾರಿಯವರೊಂದಿಗೆ ಸಭೆಗೆ ಹಾಜರಾಗುವಂತೆ ಪತ್ರ ಬರೆಯಲಾಗಿತ್ತು. ಅದರಂತೆ ಮಂಗಳೂರು ಡಿಪೋ ಪ್ರತಿನಿಧಿ ಸಭೆಗೆ ಹಾಜರಾಗಿ ಈ ಸಮಸ್ಯೆಯನ್ನು ಕೂಡಲೇ ಇತ್ಯರ್ಥಗೊಳಿಸುವುದಾಗಿ ತಿಳಿಸಿರುತ್ತಾರೆ. ಆದ್ದಿಂದ ಇದೀಗ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ – 8, ಪಟ್ಟಣ ಪಂಚಾಯತ್‌ನಲ್ಲಿ- 1, ಪುರಸಭೆ – 1, ಒಟ್ಟು 10 ಕಾರ್ಯಕ್ರಮಗಳನ್ನು ಗ್ಯಾರಂಟಿ ಯೋಜನೆಗಳು ವಿವಿಧಮ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುತ್ತಿರುವುದರಿಂದ ಸಮನ್ವಯ ಸಾಧಿಸುವ ದೃಷ್ಟಿಯಿಂದ ಮತ್ತು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಉದ್ದೇದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೋಂದಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾಠ್ಯಕ್ರಮದಲ್ಲಿ ಗೃಹಲಕ್ಷ್ಮಿಗೆ ಒಟ್ಟು 576 ಫಲಾನುಭವಿಗಳು ಭಾಗವಹಿಸಿದ್ದರು. 84 ಹೊಸ ಅರ್ಜಿಗಳು, 184 ತೆರಿಗೆ ಪಾವತಿದಾರರು, 55 ಪಡಿತರ ಚೀಟಿ ತಿದ್ದುಪಡಿಯಾದವರು, 16 ಫಲಾನುಭವಿಗಳ ಮರಣ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 16 ಜನ ಆಧಾರ ಸೀಡಿಂಗ್ ಮಾಡಿಸಿರುತ್ತಾರೆ.

ಅನ್ನಭಾಗ್ಯ ಒಟ್ಟು ಅರ್ಜಿಗಳು 795. ಇದರಲ್ಲಿ 538 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 257 ಅರ್ಜಿಗಳು ತನಿಕಾ ಹಂತದಲ್ಲಿದೆ.

ಗೃಹಲಕ್ಷ್ಮಿ ಯೋಜನೆ:-
ಬಂಟ್ವಾಳ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆ ಆರಂಭವಾದ ಆಗಸ್ಟ್ 2023 ರಿಂದ ಡಿಸೆಂಬರ್ 2023 ರ ವರೆಗೆ 65222 ಫಲಾನುಭವಿಗಳು ನೋಂದಾಯಿಸಿದ್ದು, ನಂತರ ಪಡಿತರ ಚೀಟಿ ತಿದ್ದುಪಡಿಗೊಳಿಸಿದ 4871 ಫಲಾನುಭವಿಗಳು ಜನವರಿ 06/2024 ರಿಂದ ಡಿಸೆಂಬರ್ 2024 ರ ವರೆಗೆ ನೋಂದಾಯಿಸಿದ್ದು, ಒಟ್ಟು ಬಂಟ್ವಾಳ ತಾಲೂಕಿನಲ್ಲಿ ಡಿಸೆಂಬರ್ 2024 ರ ಅಂತ್ಯದವರೆಗೆ 70093 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿರುತ್ತಾರೆ. ಇವರಲ್ಲಿ 67388 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಮೊತ್ತವು ಜಮೆ ಆಗುತ್ತಿದೆ. ಸದ್ರಿ ಅಕ್ಟೋಬರ್ 2024 ರ ವರೆಗಿನ ಮೊತ್ತವು ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ತಾಲೂಕಿನಲ್ಲಿ 4698 ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಬಾಕಿ ಇರುತ್ತಾರೆ. 785 ಆದಾಯ ತೆರಿಗೆ ಪಾವತಿದಾರರು, 597 ವಾಣಿಜ್ಯ ತೆರಿಗೆ ಪಾವತಿದಾರರ ಅರ್ಜಿಯು ತಿರಸ್ಕೃತವಾಗಿರುತ್ತದೆ. . 202,16,40,000/- 15 ತಿಂಗಳ ಮೊತ್ತವು ಈ ವರೆಗೆ ಬಂಟ್ವಾಳ ತಾಲೂಕಿನ ಫಲಾನುಭವಿಗಳ ಖಾತೆಗೆ ಜಮೆ ಆಗಿರುತ್ತದೆ.

ಅನ್ನಭಾಗ್ಯದ ಯೋಜನೆ:-

ಅನ್ನಭಾಗ್ಯದ ಯೋಜನೆಯನ್ನು ಪಡೆಯುತ್ತಿರುವ ಫಲಾನುಭವಿಗಳು:-
ಅಂತ್ಯೋದಯ (AAY) : 3,736
ಬಿಪಿಎಲ್ (PHH) : 50,007
ಈ ವರೆಗೆ ಬಿಡುಗಡೆಯಾದ ಮೊತ್ತ : ರೂ. 10,03,18,700/-

ಯುವನಿಧಿ:-
ನೋಂದಣೆ : 857
ಕನಿಷ್ಟ ಡಿ.ಬಿ.ಟಿ. ಪಡೆದವರು : 763 – ಶೇ. 89.01%
ಒಟ್ಟು ಮೊತ್ತ ಪಾವತಿ : ರೂ. 95,59,500/-

ಗೃಹಜ್ಯೋತಿ:-
ಒಟ್ಟು ಬಳಕೆದಾರರು : 103317
ಅರ್ಹ ಫಲಾನುಭವಿಗಳು : 92930
ನೋಂದಣೆಯಾದ ಫಲಾನುಭವಿಗಳು : 91513
2024-25 ನೇ ಸಾಲಿನಲ್ಲಿ ಪಾವತಿ ಒಟ್ಟು : 5.415.98 (ಲಕ್ಷಗಳಲ್ಲಿ)
2023-24ನೇ ಸಾಲಿನಲ್ಲಿ ಪಾವತಿ ಒಟ್ಟು : 4,974.85 (ಲಕ್ಷಗಳಲ್ಲಿ)
ಒಟ್ಟು : : 98.48 (ಲಕ್ಷಗಳಲ್ಲಿ)

- Advertisement -

Related news

error: Content is protected !!