Friday, June 19, 2026
spot_imgspot_img
spot_imgspot_img

1 ಲಕ್ಷ ರೂ. ಮೌಲ್ಯದ ಗಾಂಜಾ ನಾಶಪಡಿಸಿದ ಪೊಲೀಸ್ ಇಲಾಖೆ..!

- Advertisement -
- Advertisement -

ರಾಯಚೂರು: ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಯಕ್ಲಾಸಪುರ ರಸ್ತೆಯಲ್ಲಿರುವ ವೈದ್ಯಕೀಯ ತಾಜ್ಯ ವಿಲೇವಾರಿ ಘಟಕದಲ್ಲಿ ಗುರುವಾರ 1.26 ಲಕ್ಷ ರೂ. ಮೌಲ್ಯದ 11 ಕೆಜಿ ಗಾಂಜಾ ನಾಶಪಡಿಸಲಾಯಿತು.

ಜಿಲ್ಲೆಯ ಬಳಗಾನೂರು ಠಾಣೆ, ತುರ್ವಿಹಾಳ ಠಾಣೆ, ಯರಗೇರಾ ಠಾಣೆ, ಮಸ್ಕಿ ಠಾಣೆ, ರಾಯಚೂರು ಗ್ರಾಮೀಣ ಠಾಣೆ, ರಾಯಚೂರು ಸೆನ್ ಪೊಲೀಸ್ ಠಾಣೆ, ಸಿಂಧನೂರು ಗ್ರಾಮೀಣ ಠಾಣೆ, ಸದರ್ ಬಜಾರ್ ಠಾಣೆ, ಲಿಂಗಸುಗೂರು ಠಾಣೆಗಳಲ್ಲಿ 2023 ಹಾಗೂ 2024 ಸಾಲಿನಲ್ಲಿ 13 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಗಾಂಜಾ ನಾಶ ಪಡಿಸಲಾಯಿತು.

ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಜಿ. ಹರೀಶ್ ಹಾಗೂ ಸದಸ್ಯರಾದ ರಾಯಚೂರು ಉಪವಿಭಾಗದ ಡಿ.ಎಸ್.ಪಿ ಎಂ.ಜಿ.ಸತ್ಯ ನಾರಾಯಣ ರಾವ್, ಲಿಂಗಸುಗೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ದತ್ತಾತ್ರೇಯ ಕರ್ನಾಡ್, ರಿಮ್ ಆಕ್ಟ್ ರಾಯಚೂರು ಇದರ ಅಧ್ಯಕ್ಷ ಡಾ.ಶ್ರೀಶೈಲೇಶ ಅಮರಖೇಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣದ ಪರಿಸರ ಅಧಿಕಾರಿ ಪ್ರಕಾಶ, ಉಪ ಪರಿಸರ ಅಧಿಕಾರಿ ಶೈಲಜಾ.ವಿ.ಅಮೀನಗಡ, ತಾಂತ್ರಿಕ ಅಧಿಕಾರಿ ಜಯಕುಮಾರ, ಡಿ.ಸಿ.ಆ‌ರ್.ಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ತಿಮ್ಮಣ್ಣ ಎಸ್. ಅವರಿ ಹಾಜರಿದ್ದರು.

- Advertisement -

Related news

error: Content is protected !!