Sunday, June 29, 2025
spot_imgspot_img
spot_imgspot_img

ಹೃದಯಾಘಾತದಿಂದ ವ್ಯಕ್ತಿ ಮೃತ್ಯು..!

- Advertisement -
- Advertisement -

ಮಂಗಳೂರು: ಸೌದಿ ಅರೇಬಿಯದ ರಿಯಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂಲ್ಕಿ ಮೂಲದ ವ್ಯಕ್ತಿಯೋರ್ವರು ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮನ್ಸೂರ್‌ ಮೂಲ್ಕಿ (41) ಎಂದು ಗುರುತಿಸಲಾಗಿದೆ.

ಮೂಲತಃ ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದವರು. ಮೂಲ್ಕಿ ಕಾರ್ನಾಡಿನ 7-ಸ್ಟಾರ್‌ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಹಾಗೂ ಮಾನೀಷ್‌ ಯೂತ್‌ ಕ್ಲಬ್‌ನ ಸದಸ್ಯರಾಗಿದ್ದರು, ವಾಹನ ಚಲಾಯಿಸುವಾಗಲೇ ಹೃದಯಾಘಾತದಿಂದ ನಿಧನರಾದರು ಎಂದು ಹೇಳಲಾಗಿದೆ. ಅಲ್ಲದೆ ಸಾವು ಸಂಭವಿಸುವ 15 ನಿಮಿಷದ ಮೊದಲು ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್‌ನಲ್ಲಿ ತಾಯಿಯ ಜತೆಗೆ ಮಾತನಾಡಿದ್ದರು. ಮೃತರು ತಾಯಿ, ಪತ್ನಿ, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!