Monday, June 22, 2026
spot_imgspot_img
spot_imgspot_img

ವೈಟ್ ಹೌಸ್ ನಿಂದ ಹೊರ ನಡೆಯುವ ಸುಳಿವು ನೀಡಿದ ಟ್ರಂಪ್!!

- Advertisement -
- Advertisement -

ವಾಷಿಂಗ್ಟನ್‌: ನಮ್ಮ ಆಡಳಿತ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೇರಿರಲಿಲ್ಲ. ಆದರೆ ಭವಿಷ್ಯದಲ್ಲಿ ಯಾವ ಆಡಳಿತದಿಂದ ಏನು ಸಂಭವಿಸುತ್ತೋ ಯಾರಿಗೆ ಗೊತ್ತು? ಕಾಲವೇ ಉತ್ತರಿಸತ್ತೆ.. ಹೀಗೆಂದವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಇದೇ ಮೊದಲ ಬಾರಿಗೆ ಶ್ವೇತಭವನದಿಂದ ನಿರ್ಗಮಿಸುವ ಸುಳಿವನ್ನು ಟ್ರಂಪ್ ನೀಡಿದ್ದಾರೆ.

ಕೊರೋನಾ ಲಸಿಕೆ ಪ್ರಗತಿ ಕುರಿತಾಗಿ ಮಾತನಾಡಿದ ಅವರು “ನಮ್ಮ ಆಡಳಿತ ಲಾಕ್‌ಡೌನ್‌ ಹೇರಿರಲಿಲ್ಲ. ಆದರೆ ಭವಿಷ್ಯದಲ್ಲಿ ಯಾವ ಆಡಳಿತದಿಂದ ಏನು ಸಂಭವಿಸುತ್ತೋ ಯಾರಿಗೆ ಗೊತ್ತು? ಕಾಲವೇ ಉತ್ತರಿಸತ್ತೆ…’ ಎಂದಿದ್ದಾರೆ.

ಫ‌ಲಿತಾಂಶ ಪ್ರಕಟಗೊಂಡ ವಾರದ ಬಳಿಕ ಟ್ರಂಪ್‌ ಈ ಸಾಲುಗಳ ಮೂಲಕ ಮೌನ ಮುರಿದಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪುನಃ ಟ್ವೀಟ್‌ನಲ್ಲಿ ಖಂಡಿಸಿರುವ ಟ್ರಂಪ್‌ ತಮ್ಮ ಬೆಂಬಲಿಗರ ಮೂಲಕ ಬೃಹತ್‌ ಹೋರಾಟಕ್ಕೆ ಯೋಜನೆ ರೂಪಿಸಿದ್ದಾರೆ. “ಮತ ಕಳವು ನಿಲ್ಲಿಸಿ” “ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌” ಮುಂತಾದ ಸ್ಲೋಗನ್‌ನ ಬ್ಯಾನರನ್ನು ಹಲವು ಗುಂಪುಗಳ ಮೂಲಕ ದೇಶಾದ್ಯಂತ ರಾರಾಜಿಸುವಂತೆ ಮಾಡಲು ರಿಪಬ್ಲಿಕನ್‌ ನಿರ್ಧರಿಸಿದೆ.

- Advertisement -

Related news

error: Content is protected !!