Friday, September 11, 2026
spot_imgspot_img
spot_imgspot_img

ಈಜಲು ನದಿಗೆ ತೆರಳಿದ್ದ ಯುವಕ ನೀರುಪಾಲು

- Advertisement -
- Advertisement -

ಹಾಸನ: ಪಿಯುಸಿ ಪರೀಕ್ಷೆ ಬರೆದು ತಾಲೂಕಿನ ಗೊರೂರಿನ ಹೇಮಾವತಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲಾಗಿದ್ದು, ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ.ನೀರುಪಾಲಾದ ವಿದ್ಯಾರ್ಥಿ ರಘು (18) ಎಂದು ತಿಳಿದು ಬಂದಿದೆ.

ರಘು ಹಾಸನದ ಆರ್.ಸಿ. ರಸ್ತೆಯಲ್ಲಿರುವ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ಪಿಯುಸಿ ಪರೀಕ್ಷೆ ಬರೆದು ರಘು ತನ್ನ ಇಬ್ಬರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಎಂದು ತಿಳಿದು ಬಂದಿದೆರಘು ಹೇಮಾವತಿ ನದಿಗೆ ಇಳಿದಿದ್ದಾನೆ. ಈಜಲು ಬಾರದ ಹಿನ್ನಲೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.ರಘು ಶವಕ್ಕಾಗಿ ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಶೋಧಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!