Monday, July 27, 2026
spot_imgspot_img
spot_imgspot_img

ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ಶಾಲಾ ವಠಾರ ಸ್ವಚ್ಛತಾ ಕಾರ್ಯಕ್ರಮ: ಮಕ್ಕಳಿಲ್ಲದ ಶಾಲೆ ಹೂವಿಲ್ಲದ ತೋಟದಂತೆ- ಆನಂದ ಶಂಭೂರು

- Advertisement -
- Advertisement -

ವಿಟ್ಲ: ಒಂದು ಶಾಲೆಯು ಶೈಕ್ಷಣಿಕವಾಗಿ ಮುಂದಿರಲು ಮತ್ತು ಸ್ವಚ್ಛವಾಗಿ ಕಂಗೊಳಿಸಲು ಆ ಶಾಲೆಯ ಮಕ್ಕಳೇ ಕಾರಣರಾಗಿರುತ್ತಾರೆ. ಆದರೆ ಪ್ರಸ್ತುತ ಕೊರೋನಾ ದಿಂದಾಗಿ ಶಾಲೆಗಳು ಹೂಗಳಿಲ್ಲದ ತೋಟದಂತೆ ಕಂಗೊಳಿಸುತ್ತಿವೆ.

ವಿದ್ಯಾರ್ಥಿಗಳ ದಿನನಿತ್ಯದ ಉತ್ತಮ ಹವ್ಯಾಸ ದಿಂದಾಗಿ ಮಜಿ ವೀರಕಂಭ ಶಾಲೆಯ ಕಳೆದ ಮೂರು ವರುಷಗಳಿಂದ ಜಿಲ್ಲಾ ಮಟ್ಟದಲ್ಲಿ ಸ್ವಚ್ಛತಾ ಪ್ರಶಸ್ತಿ ಯನ್ನು ಪಡೆದುಕೊಂಡು ತಾಲೂಕಿಗೆ ಮಾದರಿ ಶಾಲೆಯಾಗಿದೆ.

ಮಕ್ಕಳು ಶಾಲೆಗೆ ಬರದಿದ್ದರೂ ಆ ಶಾಲೆಯ ಸೌಂದರ್ಯ ಹಾಳಾಗದಂತೆ ಕಾಪಾಡುವ ದೃಷ್ಟಿಯಿಂದ ಸಮುದಾಯದ ತೊಡಗಿಸಿಕೊಳ್ಳುವಿಕೆಯು ಊರಿನ ಅಭಿವೃದ್ಧಿ ಗೆ ಹಿಡಿದ ಕೈಕನ್ನಡಿಯಾಗಿದೆ ಎಂದು ಬಂಟ್ವಾಳ ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಶ್ರೀಯುತ ಆನಂದ ಶಂಭೂರು ರವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ಬಂಟ್ವಾಳ ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶಾಲಾ ವಠಾರ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ, ಉಪಾಧ್ಯಕ್ಷರಾದ ಮೋಹನ್ ದಾಸ್ ,ಕಾರ್ಯದರ್ಶಿ ಸಂತೋಷ್ ಪೂಜಾರಿ, ತಾಲೂಕು ಸಹಕಾರಿ ಭಾರತಿ ನಿರ್ದೇಶಕ ವಿಶ್ವನಾಥ ಎಂ, ಮಜಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ , ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಕೊರಗಪ್ಪ ನಾಯ್ಕ ಸಿಂಗೆರಿ, ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಪದ್ಮನಾಭ ಮೂಲ್ಯ ಉಪಸ್ಥಿತರಿದ್ದರು.

ವೀರಕಂಬ ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ ಆಚಾರ್ಯ, ಸದಸ್ಯ ಜಯಂತಿ ಜನಾರ್ಧನ್ ,ಶ್ರೀಮತಿ ಸೇವಂತಿ ಬಿಜೆಪಿ ವೀರಕಂಬ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಬಾಯಿಲ ,ಮಹಾಲಕ್ಷ್ಮಿ ಗಣೇಶ ಕೊಡಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸದಸ್ಯರಾದ ವೀರಪ್ಪ ಮೂಲ್ಯ ಬೆತ್ತ ಸರವು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾದ ಚಂದ್ರಶೇಖರ್ ಬಂಗೆರ ಬಾಯಿಲ ವಂದಿಸಿದರು.

- Advertisement -

Related news

error: Content is protected !!