Tuesday, July 28, 2026
spot_imgspot_img
spot_imgspot_img

ಕಾಲ್‌ಗರ್ಲ್ ನ ಬೆದರಿಕೆಯಿಂದ 97 ಸಾವಿರ ರೂಪಾಯಿ ಕಳೆದುಕೊಂಡ ಯುವಕ

- Advertisement -
- Advertisement -

ಬೆಂಗಳೂರು: ಆನ್‌ಲೈನ್ ಜಾಹೀರಾತಿನಿಂದ ಪ್ರೇರಿತನಾದ ಬೆಂಗಳೂರಿನ ಉದ್ಯೋಗಿಯೊಬ್ಬ ಕಾಲ್‌ಗರ್ಲ್ ಜತೆ ಒಂದು ರಾತ್ರಿ ಕಳೆದಿದ್ದು ಆಕೆಯ ಬೆದರಿಕೆಯಿಂದಾಗಿ 97 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ.

ಈ ಕುರಿತಂತೆ ಬೆಂಗಳೂರು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಆ್ಯಪ್ ಒಂದರಲ್ಲಿ ಕಾಲ್‌ಗರ್ಲ್ ಸಿಗುವುದಾಗಿ ಜಾಹೀರಾತು ನೋಡಿದ ಈತ ಅಲ್ಲಿದ್ದ ನಂಬರ್ ಗೆ ಕರೆ ಮಾಡಿದ್ದ. ಆಕೆಯನ್ನು ಮನೆಗೆ ಕರೆಸಿಕೊಳ್ಳಲು 10 ಸಾವಿರ ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದ.

ರಾತ್ರಿ ಈತನ ಜತೆ ಕಳೆದ ಯುವತಿ ತಾನೊಂದು ಸ್ವಯಂಸೇವಾ ಸಂಘಟನೆ ನಡೆಸುತ್ತಿರುವುದಾಗಿ ಹೇಳಿದ್ದು ಆ ಸಂಘಟನೆಗೆ ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಈತನಿಗೆ ಬೆದರಿಕೆ ಹಾಕಿದ್ದಳು. ಆಕೆಯ ಮೆನೇಜರ್ ಎಂದು ಪರಿಚಯಿಸಿಕೊಂಡು ಕರೆಮಾಡಿದ್ದ ಮತ್ತೊಬ್ಬ ಆರೋಪಿ ಸಹ ಈತನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಹೆದರಿದ ಈತ ಅವರು ನೀಡಿದ್ದ ಬ್ಯಾಂಕ್ ಖಾತೆಗೆ 97 ಸಾವಿರ ರವಾನಿಸಿದ್ದಾನೆ.

ಹಣ ಕಳುಹಿಸಿದ ಬಳಿಕ ಮಹಿಳೆ ನಾಪತ್ತೆಯಾಗಿದ್ದು ಮೊಬೈಲ್ ನಂಬರ್ ಆಧರಿಸಿ ಆಕೆಯ ಪತ್ತೆಗೆ ಯತ್ನಿಸುತ್ತಿದ್ದು. ಅಪರಿಚಿತ ಮಹಿಳೆ ಹಾಗೂ ಆಕೆಯ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!