Tuesday, June 23, 2026
spot_imgspot_img
spot_imgspot_img

ದಾಖಲೆಯಲ್ಲಿ ಮಾರಾಟ ಕಂಡ ‘ಎ ಪ್ರಾಮಿಸ್ಡ್ ಲ್ಯಾಂಡ್’

- Advertisement -
- Advertisement -

ವಾಶಿಂಗ್ಟನ್: ಒಂದೇ ದಿನದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ನ ಸುಮಾರು 8.9 ಲಕ್ಷ ಪ್ರತಿಗಳು ಮಾರಾಟವಾಗಿವೆ.


ಅಮೆರಿಕ ಮತ್ತು ಕೆನಡಗಳಲ್ಲಿ ಮೊದಲ 24 ಗಂಟೆಗಳಲ್ಲಿ 8.9 ಲಕ್ಷ ಪ್ರತಿಗಳು ಮಾರಾಟವಾಗಿದ್ದು, ದಾಖಲೆ ಸೃಷ್ಟಿಸುವ ಸಾಧ್ಯತೆಯಿದೆ. ಪುಸ್ತಕವೊಂದರ ಇಷ್ಟು ದೊಡ್ಡ ಸಂಖ್ಯೆಯ ಪ್ರತಿಗಳು ಮಾರಾಟವಾಗಿರುವುದು ಪ್ರಕಾಶಕ ಪೆಂಗ್ವಿನ್ ರ್ಯಾಂಡಮ್ ಹೌಸ್‌ಗೂ ದಾಖಲೆಯಾಗಿದೆ. 8.9 ಲಕ್ಷ ಪ್ರತಿಗಳಲ್ಲಿ ಮುಂಚಿತವಾಗಿ ಕಾದಿರಿಸಲಾದ ಮತ್ತು ಮೊದಲ ದಿನ ಮಾರಾಟವಾದ ಪ್ರತಿಗಳು ಸೇರಿವೆ.


ಬರಾಕ್ ಒಬಾಮರ ಪತ್ನಿ ಮಿಶೆಲ್ ಒಬಾಮರ ಆತ್ಮಚರಿತ್ರೆ ‘ಬಿಕಮಿಂಗ್’ ಎರಡು ವರ್ಷಗಳ ಹಿಂದೆ ಪ್ರಕಟಗೊಂಡಿದೆ. ಅದರ 1.4 ಕೋಟಿ ಪ್ರತಿಗಳು ಮಾರಾಟವಾಗಿವೆ. 2017ರಲ್ಲಿ ಆತ್ಮಚರಿತ್ರೆಗಳಿಗಾಗಿ ಒಬಾಮ ದಂಪತಿಯೊಂದಿಗೆ 65 ಮಿಲಿಯ ಡಾಲರ್ (ಸುಮಾರು 480 ಕೋಟಿ ರೂ.) ಕರಾರಿಗೆ ಪೆಂಗ್ವಿನ್ ಕಂಪನಿ ಸಹಿ ಹಾಕಿತ್ತು.

- Advertisement -

Related news

error: Content is protected !!