





ಹಿಂದೂ ಧಾರ್ಮಿಕ ಸೇವಾ ಸಮಿತಿ, ಕೆಲಿಂಜ ಇದರ ವತಿಯಿಂದ ‘ಶ್ರೀನಿಕೇತನ ಮಂದಿರ, ಕೆಲಿಂಜ’ದಲ್ಲಿ ದಿನಾಂಕ 10-05-2025 ನೇ ಶನಿವಾರ ಸಂಜೆ ಗಂಟೆ 6 ರಿಂದ ವೇ. ಮೂ. ಮಹೇಶ ಭಟ್ಟರ ನೇತೃತ್ವದಲ್ಲಿ “ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾಕಾರ್ಯಕ್ರಮ”ವು ನಡೆಯಲಿದೆ.ಶ್ರೀ ನರೇಶ್ ಶೆಟ್ಟಿ ಕಲ್ಮಲೆಯವರು ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಿದ್ದಾರೆ. ಕೆಲಿಂಜೇಶ್ವರಿ ಭಜನಾ ಮಂಡಳಿ, ಕೆಲಿಂಜ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭೆಯ ಸಭಾಧ್ಯಕ್ಷತೆಯನ್ನು ಶ್ರೀ ರಾಜೇಂದ್ರ ಟೈಲರ್ ನಗ್ರಿಮೂಲೆ ಅಧ್ಯಕ್ಷರು, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ವಹಿಸಲಿದ್ದಾರೆ. ಸಭೆಯ ಮುಖ್ಯ ಅತಿಥಿಗಳಾಗಿ ಶ್ರೀ ರಾಜೇಂದ್ರ ಟೈಲರ್ ನಗ್ರಿಮೂಲೆ ಅಧ್ಯಕ್ಷರು, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ, ಶ್ರೀ ಜಗದೀಶ್ ಕಲ್ಲಡ್ಕ, ಅಧ್ಯಾಪಕರು ಪ್ರಾಂತ ಗ್ರಾಮ ವಿಕಾಸ ಸಹ ಸಂಯೋಜಕರು, ಶ್ರೀ ಸುರೇಶ್ ಗೌಡ ಬೈಲು ಅಧ್ಯಕ್ಷರು, ಒಕ್ಕಲಿಗ/ಗೌಡ ಸೇವಾ ಸಂಘ (ರಿ) ಕಡಬ, ಸಂತೋಷ್ ಶೆಟ್ಟಿ ಪೆಲತ್ತಡ್ಡ ವಲಯ ಉಪಾಧ್ಯಕ್ಷರು ಜೆಸಿಐ ಭಾರತ ಇರಲಿದ್ದಾರೆ.








