Monday, July 7, 2025
spot_imgspot_img
spot_imgspot_img

ಶಾಲೆ ತೆರೆಯುವ ಕುರಿತು ಸೋಮವಾರ ಸಿಎಂ ನೇತೃತ್ವದಲ್ಲಿ ಸಭೆ

- Advertisement -
- Advertisement -

ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆ ಲಾಕ್​ಡೌನ್​ ಜಾರಿಗೆ ತಂದ ಸಮಯದಲ್ಲಿ ಮುಚ್ಚಲಾದ ಶಾಲೆಯ ಬಾಗಿಲುಗಳನ್ನು ಈವರೆಗೆ ತೆರೆಯಲಾಗಿಲ್ಲ. ಕೇಂದ್ರ ಸರ್ಕಾರ ಶಾಲೆಗಳನ್ನ ತೆರೆಯುವ ಆಯ್ಕೆಯನ್ನು ರಾಜ್ಯ ಸರ್ಕಾರಗಳಿಗೇ ನೀಡಿದ್ದರೂ ಸಹ ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ಹಿನ್ನೆಲೆ ಶಾಲೆ ತೆರೆಯಲು ಸರ್ಕಾರ ಹಿಂದುಮುಂದು ನೋಡುವಂತಾಗಿದೆ.

ಶಾಲೆ ತೆರೆಯುವ ಕುರಿತು ಈವರೆಗೆ ಹಲವು ಬಾರಿ ಚರ್ಚೆಗಳೂ ಸಹ ನಡೆದಿವೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೀಗ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ಈ ಸಭೆಯಲ್ಲಿ ಬಹುತೇಕ ಶಾಲೆ ತೆರೆಯುವ ಕುರಿತು ತೀರ್ಮಾನ ಹೊರಬೀಳುವ ಸಾಧ್ಯತೆಗಳಿವೆ.ಸಭೆಯಲ್ಲಿ ಶಿಕ್ಷಣ ಸಚಿವರು, ಅಧಿಕಾರಿಗಳು ಭಾಗಿಯಾಗಲಿದ್ದು ಸಿಎಂ ಅಧಿಕಾರಿಗಳ ಜೊತೆ ಮಹತ್ವದ ಚರ್ಚೆಗಳನ್ನು ನಡೆಸಲಿದ್ದಾರಂತೆ. ಅಲ್ಲದೇ ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಭಿಪ್ರಾಯ ಸಂಗ್ರಹವನ್ನೂ ಮಾಡಲಾಗುತ್ತದೆ ಎನ್ನಲಾಗಿದೆ.

- Advertisement -

Related news

error: Content is protected !!