Saturday, June 28, 2025
spot_imgspot_img
spot_imgspot_img

ಮ್ಯಾನೇಜರ್ ಮೇಲೆ ಹಲ್ಲೆ ; ನಟ ಉನ್ನಿ ಮುಕುಂದನ್ ವಿರುದ್ಧ ದೂರು ದಾಖಲು..!

- Advertisement -
- Advertisement -

ಕೊಚ್ಚಿ: ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಖ್ಯಾತ ಮಲಯಾಳಂ ನಟ ಉನ್ನಿ ಮುಕುಂದನ್ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊಚ್ಚಿ ಇನ್ಫೋ ಪಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ನಟ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ವಿಪಿನ್ ಕುಮಾರ್ ದೂರು ನೀಡಿದ್ದಾರೆ. ಟೋವಿನೋ ಥಾಮಸ್ ನಟನೆಯ ‘ನರಿವೆಟ್ಟ’ ಸಿನಿಮಾವನ್ನ ಮೆಚ್ಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ನಟ ಉನ್ನಿ ತಮಗೆ ಕಪಾಳಮೋಕ್ಷ ಮಾಡಿದ್ದಾರೆ. ಜೊತೆಗೆ ಕೆಟ್ಟ ಪದಗಳಿಂದ ತಮಗೆ ನಿಂದಿಸಿದ್ದಾರೆ ಎಂದು ಮ್ಯಾನೇಜರ್ ವಿಪಿನ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಕೊಚ್ಚಿ ಇನ್ಫೋ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಮಲಯಾಳಂ ಕಲಾವಿದರ ಸಂಘದಲ್ಲಿಯೂ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ದೂರು ನೀಡಿರೋದಾಗಿ ಹೇಳಿದ್ದಾರೆ.

ನಾನು ಅನೇಕ ಸಿನಿಮಾಗಳಿಗೆ ಪಿಆರ್ ಆಗಿ ಕೆಲಸ ಮಾಡಿದ್ದೇನೆ. ಅದರಂತೆ ‘ನರಿವೆಟ್ಟ’ ಸಿನಿಮಾಗೂ ಪ್ರಚಾರ ಮಾಡಿದ್ದೆ, ಈ ಸಿನಿಮಾ ಬಗ್ಗೆ ಹೊಗಳಿ ಪೋಸ್ಟ್ ಮಾಡಿದ್ದು ಉನ್ನಿ ಮುಕುಂದನ್‌ಗೆ ಇಷ್ಟವಾಗಲಿಲ್ಲ. ಹಾಗಾಗಿ ಮೇ 26ರಂದು ತಮ್ಮ ಫ್ಲಾಟ್‌ನ ಪಾರ್ಕಿಂಗ್ ಏರಿಯಾಗೆ ತಮ್ಮನ್ನು ಕರೆದು ನಟ ಹಲ್ಲೆ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

- Advertisement -

Related news

error: Content is protected !!