Friday, June 27, 2025
spot_imgspot_img
spot_imgspot_img

ಮಂಗಳೂರು ವಿ.ವಿ.ಯಲ್ಲಿ ‘ಕೊರತೆ ಬಜೆಟ್’ ಮಂಡನೆ

- Advertisement -
- Advertisement -

ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯದ ಶೈಕ್ಷಣಿಕಮಂಡಳಿಯ ವಿಶೇಷ ಸಭೆಯಲ್ಲಿಂದು 2025-26 ಸಾಲಿನಲ್ಲಿ 200.27 ಕೋಟಿ ರೂ. ವೆಚ್ಚದ 36.98 ಕೋಟಿ ರೂ. ಕೊರತೆಯ ಮುಂಗಡ ಪತ್ರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ರವರ ಅಧ್ಯಕ್ಷತೆ ಯಲ್ಲಿ ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಮಂಡಿಸಿದರು.

2025-26ನೇ ಸಾಲಿನಲ್ಲಿ ಯೋಜನೇತರ ಆದಾಯ 129.88 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, 2024-25ನೇ ಸಾಲಿನಲ್ಲಿ 143.22 ಕೋಟಿ ರೂ. ಆಗಿತ್ತು. 2024-25ನೇ ಸಾಲಿಗೆ ಹೋಲಿಸಿದರೆ ಪ್ರಸ್ತುತ ಸಾಲಿನ ಯೋಜನೇತರ ಆದಾಯದಲ್ಲಿ 13.34 ಕೋಟಿ ರೂ. ಕೊರತೆಯಾಗಿರುತ್ತದೆ. ಈ ಪ್ರಸ್ತಾವನೆಯಲ್ಲಿ ರಾಜ್ಯ ಸರ್ಕಾರದ ವೇತನ ಅನುದಾನ, ಪಿಂಚಣಿ ಅನುದಾನ ಹಾಗೂ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹವಾಗುವ ಅನುದಾನಗಳು ಒಳಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!