Wednesday, July 29, 2026
spot_imgspot_img
spot_imgspot_img

ಪತ್ನಿಯನ್ನು ಬಿಟ್ಟು ಕೊಡಲು ಒಪ್ಪದ ಪತಿ- ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪಾಪಿ ಪತ್ನಿ!!

- Advertisement -
- Advertisement -

ಚಿಕ್ಕಮಗಳೂರು: ಇಲ್ಲೊಬ್ಬ ಭೂಪ ಪತಿಯ ಬಳಿಯಲ್ಲಿಯೇ ನಿನ್ನ ಪತ್ನಿಯನ್ನು ನನಗೆ ಬಿಟ್ಟುಕೊಡು ಎಂದಿದ್ದಾನೆ. ಆದರೆ ಪತಿ ಪತ್ನಿಯನ್ನು ಬಿಟ್ಟು ಕೊಡೋದಕ್ಕೆ ನಿರಾಕರಿಸಿದ್ದಾನೆ. ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂಡು ಹಾಕಿದ್ದಾಳೆ.

ಈ ಘಟನೆ ನಡೆದಿರೋದು ಕಾಫಿನಾಡು ಚಿಕ್ಕಮಗಳೂರಲ್ಲಿ. ಹೌದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ದೊಡ್ಡಹಟ್ಟಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ದೊಡ್ಡಹಟ್ಟಿಯ ನಿವಾಸಿ ಪ್ರದೀಪ್ ಎಂಬಾತನೇ ಕೊಲೆಯಾದ ದುರ್ದೈವಿ. ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದ ಪ್ರದೀಪ್ ಹಾಗೂ ರಾಗಿಣಿ ದಂಪತಿಗಳ ನಡುವೆ ವಿರಸಕ್ಕೆ ಕಾರಣವಾಗಿತ್ತು.

ಗುಬ್ಬಿಹಳ್ಳಿಯ ಶ್ರೀನಿವಾಸ್. ಪ್ರದೀಪ್ ಜೊತೆಯಲ್ಲಿಯೇ ಗಾರೆ ಕೆಲಸ ಮಾಡ್ತಿದ್ದ ಶ್ರೀನಿವಾಸ ದಿನೇ ದಿನೇ ಪ್ರದೀಪ್ ಪತ್ನಿ ರಾಗಿಣಿಗೆ ಹತ್ತರವಾಗಿದ್ದ. ಇಬ್ಬರ ನಡುವಲ್ಲಿ ಅನೈತಿಕ ಸಂಬಂಧ ಹಲವು ಸಮಯಗಳ ವರೆಗೂ ಮುಂದುವರಿದುಕೊಂಡು ಬಂದಿತ್ತು. ಕೊನೆಗೆ ಶ್ರೀನಿವಾಸ್ ನಿನ್ನ ಪತ್ನಿಯನ್ನ ನನಗೆ ಬಿಟ್ಟು ಕೊಡು ಅಂತಾನೂ ಪ್ರದೀಪ್ ಬಳಿಯಲ್ಲಿ ಕೇಳಿದ್ದಾನೆ. ಆದರೆ ಪ್ರದೀಪ್ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ರಾಗಿಣಿ ಹಾಗೂ ಶ್ರೀನಿವಾಸ್ ಸೇರಿಕೊಂಡು ಪ್ರದೀಪ್ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದಾರೆ.

- Advertisement -

Related news

error: Content is protected !!