Monday, June 8, 2026
spot_imgspot_img
spot_imgspot_img

ಗುಂಡು ಹಾರಿಸಿ ಜಾನುವಾರು ಹತ್ಯೆ; ಅಕ್ರಮ ಗೋಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ

- Advertisement -
- Advertisement -

ಜಾನುವಾರು ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ‌ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಕ್ರಮ ಗೋಮಾಂಸ ಮಾರಾಟ ಜಾಲದಿಂದ ಅಮಾನವೀಯ ಕೃತ್ಯ ನಡೆಸಲಾಗಿದ್ದು, ಮಂಗಳವಾರ ಸಂಜೆ ಕಾಫಿತೋಟದಲ್ಲಿದ್ದ ಎಮ್ಮೆ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಎಮ್ಮೆಯನ್ನು ಕೊಂದು ಮಾಂಸ ಮಾಡುತ್ತಿದ್ದ ವೇಳೆ ಮಾಹಿತಿ ತಿಳಿದು ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಜನರು ಬರುತ್ತಲೇ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕ್ಯಾಮನಹಳ್ಳಿಯ ದಯಾನಿದಿ ಎಂಬುವವರಿಗೆ ಸೇರಿದ ಎಮ್ಮೆಯನ್ನು ಪಾಪಿಗಳು ಕೊಂದಿದ್ದಾರೆ. ಪರವಾನಗಿ ಇಲ್ಲದ ಬಂದೂಕಿನಿಂದ ದಾಳಿ ನಡೆಸಿ ಎಮ್ಮೆಯ ಹತ್ಯೆ ಮಾಡಲಾಗಿದೆ. ಜಾನುವಾರು ಹತ್ಯೆ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತರಿಂದ ಒಂದು ಬಂದೂಕು ವಶಪಡಿಸಿಕೊಳ್ಳಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!