Saturday, July 25, 2026
spot_imgspot_img
spot_imgspot_img

ಚಂದಳಿಕೆ: (ಜುಲೈ.20)ಯುವಕೇಸರಿ ಸಂಘದ ವತಿಯಿಂದ ದಶಮಾನೋತ್ಸವದ ಪ್ರಯುಕ್ತ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ

- Advertisement -
- Advertisement -

ಧರ್ಮಚಾವಡಿ ತುಳು ಚಿತ್ರ ತಂಡ ಭಾಗಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ- ಅತಿಕಾರಬೈಲು(ರಿ), ಚಂದಳಿಕೆ ಸಂಘದ ವತಿಯಿಂದ ಕೆಸರ್ ಡೊಂಜಿ ದಿನ ಕಾರ್ಯಕ್ರವು ಜುಲೈ 20-7-2025ನೇ ಭಾನುವಾರದಂದು ವಿಟ್ಲ ಚಂದಳಿಕೆ ಸಮೀಪದ ಕುರುಂಬಳ-ಅಬೀರಿ ಗದ್ದೆಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ನಡೆಯಲಿದೆ.

ಬೆಳಿಗ್ಗೆ 9.30 ಕ್ಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೊರಗಪ್ಪ ಪೂಜಾರಿ ಅಬೀರಿ, ಸೇಸಪ್ಪ ಶೆಟ್ಟಿ ಉಜಿರೆಮಾರು, ವಿಟ್ಲ ಅರಮನೆಯ ಕೃಷ್ಣಯ್ಯ. ಕೆ, ಸ್ಥಳವಾಕಾಶ ಮಾಡಿರುವ ಸದಾನಂದ ಶೆಟ್ಟಿ ಅಬೀರಿ ಮತ್ತು ಯುವಕೇಸರಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಪಟ್ಲ ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನೆಯ ಬಳಿಕ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವೈಯಕ್ತಿಕ ಆಟಗಳು, ಸಾರ್ವಜನಿಕರಿಗೆ ನೀಧಿಶೋಧನೆ ಮತ್ತು ಪುರುಷರಿಗೆ ಗುಂಪು ಆಟಗಳಾದ ಕಬ್ಬಡಿ, ವಾಲಿಬಾಲ್,ಹಗ್ಗಜಗ್ಗಾಟ ಮತ್ತು ಪಿರಮಿಡ್ ಆಟಗಳು ನಡೆಯಲಿದ್ದು ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಯುವಕೇಸರಿ ಅಧ್ಯಕ್ಷ ವನಿತ್ ಸಾಲಿಯಾನ್ ಅಬೀರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷ ಲಯನ್ ಡಿ. ಸಂಜೀವ ಪೂಜಾರಿ ವಿಟ್ಲ, ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಬೆಳ್ಳಾರೆ ಶಾಖೆಯ ಸೀನಿಯರ್ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಪಿಲಿಂಜ, ಇಡ್ಕಿದು ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ರಕ್ಷಿತಾ ಸನತ್ ಸಾಲಿಯಾನ್ ಚಂದಳಿಕೆ, ಯುವಕೇಸರಿಯ ಗೌರವ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪಾಲ್ಗೊಳ್ಳಲಿದ್ದಾರೆ.

ಅಲ್ಲದೇ ಈ ಕಾರ್ಯಕ್ರಮಕ್ಕೆ ಧರ್ಮಚಾವಡಿ ತುಳು ಚಿತ್ರ ತಂಡ ಆಗಮಿಸಲಿದೆ. ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಆಗಮಿಸಬೇಕಾಗಿ ಯುವಕೇಸರಿಯ ಕ್ರೀಡಾ ಕಾರ್ಯದರ್ಶಿ ಶ್ರೀ ಮಹೇಶ್ ಪಡೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!