Thursday, June 18, 2026
spot_imgspot_img
spot_imgspot_img

ಬಾಯಿ ಮಾತಲ್ಲೇ ಪ್ರಚಾರ ಪಡೆಯುತ್ತಿರುವ ಧರ್ಮ ಚಾವಡಿ

- Advertisement -
- Advertisement -

ತುಳು ಚಿತ್ರ ಬದಲಾವಣೆಯ ಹಾದಿ ಹಿಡಿದಿದೆ, ಇದಕ್ಕೆ ಮತ್ತೊಂದು ಸೇರ್ಪಡೆ ಧರ್ಮ ಚಾವಡಿ. ಕಥೆಯೇ ಹೀರೋ ಆಗಿರುವ ಈ ಚಿತ್ರ ಅದೆಷ್ಟು ಗಟ್ಟಿಯಾಗಿ ಪ್ರೇಕ್ಷಕನನ್ನು ಚಿತ್ರಮಂದಿರದಲ್ಲಿ ಕುರಿಸುತ್ತಿದೆ ಅಂದ್ರೆ ಎರಡೂವರೆ ಘಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ಅದರಲ್ಲು ಎರಡನೇ ಭಾಗ ಅದ್ಭುತವಾಗಿದೆ.

ತುಳುನಾಡಿನ ಮೇರು ನಟರಾದ ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಸುಂದರ್ ರೈ ಮಂದಾರ, ಸುರೇಶ್ ರೈ ಹೀಗೆ ಅನೇಕ ಹಿರಿಯ ಕಲಾವಿದರ ಜೊತೆಗೆ ಸ್ನೇಹಿತ್ ಪೂಜಾರಿ, ಧನ್ಯ ಪೂಜಾರಿ, ನೇಹಾ ಕೋಟ್ಯಾನ್, ರಕ್ಷನ್ ಮಾಡೂರು, ಪ್ರಕಾಶ್ ಧರ್ಮನಗರ, ನಿಶ್ಮಿತಾ ಶೆಟ್ಟಿ ಸೇರಿದಂತೆ ಚಿತ್ರದಲ್ಲಿ ನಟಿಸಿದ ಯುವ ಪ್ರತಿಭೆಗಳು ಸುಂದರವಾಗಿ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು ಪ್ರಸಾದ್ ಕೆ ಶೆಟ್ಟಿಯವರ ಹಿನ್ನೆಲೆ ಸಂಗೀತ ಪ್ರೇಕ್ಷಕನ ಎದೆಯನ್ನು ಝಲ್ ಅನ್ನುವಂತೆ ಮಾಡಿದೆ. ಆರಂಭದಲ್ಲಿ ಈ ಚಿತ್ರಕ್ಕೆ ಪ್ರಚಾರದ ಕೊರತೆ ಇದ್ದು ಇದೀಗ ಚಿತ್ರ ನೋಡಿದ ಪ್ರೇಕ್ಷಕ ಚಿತ್ರಕ್ಕೆ ಸ್ವ ಪ್ರಚಾರ ನೀಡುತ್ತಿದ್ದಾನೆ. ಪುತ್ತೂರಿನಲ್ಲಿ ಸತತ ಮೂರನೇ ವಾರ ಕೂಡ ಚಿತ್ರ ಹೌಸಫುಲ್ಲ್ ಶೋ ಕಾಣುತ್ತಿದೆ. ಚಿತ್ರ ನೋಡದವರು ನೋಡಿ ಒಂದು ಸುಂದರ ಸಿನಿಮಾ

- Advertisement -

Related news

error: Content is protected !!