"ಸಹ್ಯಾದ್ರಿ ಸಿರಿ" ಪ್ರಶಸ್ತಿ ಪ್ರಧಾನ ಸಮಾರಂಭ



ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ (ರಿ.) ಕೈಕಾರ ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಒಡಿಯೂರು ಶ್ರೀ ಗುರುದೇವ ಬಳಗ ಪುತ್ತೂರು ಇವರ ಸಹಕಾರದೊಂದಿಗೆ 9ನೇ ವರ್ಷದ “ನಮ್ಮ ಕೈಕಾರಡ್ ಕೆಸರ್‌ಡೊಂಜಿ ದಿನ” ಕಾರ್ಯಕ್ರಮವು 10-8-2025ನೇ ಭಾನುವಾರ ಕೈಕಾರ ಪಳ್ಳತ್ತಾರು ಶ್ರೀ ಜೂಮಾದಿ ದೈವಸ್ಥಾನದ ಬಳಿ ಶ್ರೀಮತಿ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9:00ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ (ರಿ.) ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

ಪುತ್ತೂರು ಕಂದಾಯ ನಿರೀಕ್ಷಕ ಕೆ. ಟಿ. ಗೋಪಾಲ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ತಾಲೂಕು ಬಂಟರ ಸಂಘ (ರಿ.) ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಉಪ್ಪಿನಂಗಡಿ ಕರ್ನಾಟಕ ಬ್ಯಾಂಕ್ ಲಿ. ಅಧಿಕಾರಿ ಹರೀಶ್ ಪೂಜಾರಿ ಉದ್ಯಂಗಳ, ಪಾಣಾಜೆ ಶ್ರೀ ಸುಬ್ರಹ್ಮಣೇಶ್ವರ ಭಜನಾ ಸಂಘ ಅಧ್ಯಕ್ಷ ಪಿ. ಜಿ. ಸುಬ್ರಹ್ಮಣ್ಯ ಭಟ್, ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವೈಸ್ ಪ್ರಿನ್ಸಿಪಾಲ್ ಸುದೀರ್ ಶೆಟ್ಟಿ ಚಿಪ್ಪಾರುಗುತ್ತು, ಫುಡಾ, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ ಭಟ್, ಸಂಪ್ಯ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್, ಪುತ್ತೂರು ಗುರುದೇವ ಬಳಗ ಅಧ್ಯಕ್ಷ ಸುಧೀರ್ ನೋಂಡ, ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ ಪೈಂತಿಮುಗೇರು, ಚೋಮ ನಾಯ್ಕ ಹೊಸಲಕ್ಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಆಡಳಿತ ನಿರ್ದೇಶಕರು ವಿಟಿವಿ ವಿಟ್ಲ, ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮ್‌ದಾಸ್ ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ದೈವ ನರ್ತಕ ನೇಮು ಪರವ ಮಾಡಾವು, ತುಳುನಾಡ ರಂಗ ಬೊಳ್ಳಿ ರಂಗಭೂಮಿ ಹಾಗೂ ಚಲನಚಿತ್ರ ನಟ ರವಿ ರಾಮಕುಂಜ ಇವರನ್ನು “ಸಹ್ಯಾದ್ರಿ ಸಿರಿ” 2025 ನೀಡಿ ಸನ್ಮಾನಿಸಲಾಗುವುದು. ಕುಲ ಕಸುಬು ( ಬಟ್ಟಿ ಎಣಿಯುವುದು) ಬಟ್ಯ ಕೊರಗ ಇವರನ್ನು ಸನ್ಮಾನಿಸಲಾಗುವುದು.

ಸಂಜೆ 6:00ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾಜಿ ಸಂಸದ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾ. ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಿಝರ್, U. R. Properties ಉಜ್ವಲ್ ಪ್ರಭು, ಉದ್ಯಮಿ ಅಕ್ಷಯ್ ರೈ ದಂಬೆಕಾನ, ಸೀತಾರಾಮ ರೈ ಸಿ.. ಕೈಕಾರ, ಕರ್ನಾಟಕ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ಮಾಜಿ ನಿರ್ದೇಶಕ ರಾಜಶೇಖರ್ ಶೆಟ್ಟಿ ಮಡಂತ್ಯಾರು, ಪುತ್ತೂರು ಪದ್ಮಶ್ರೀ ಸೋಲಾರ್ ಸಿಸ್ಟಮ್ ಸೀತಾರಾಮ ರೈ ಕೆದಂಬಾಡಿಗುತ್ತು, ಪುತ್ತೂರು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ (ರಿ.) ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಿಕಿರಣ್ ರೈ ಮೊಡಪ್ಪಾಡಿ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ರತ್ ರೈ ತೊಟ್ಲ, ಕೈಕಾರ ಅಡಿಕೆ ವ್ಯಾಪಾರಸ್ಥರು ಯೂಸೂಫ್ ಹಾಜಿ ಕೈಕಾರ, ಪುತ್ತೂರು ಖ್ಯಾತ ವಕೀಲ ದುರ್ಗಾಪ್ರಸಾದ್ ರೈ ಕುಂಬ್ರ, ಧಾರ್ಮಿಕ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ಇರ್ದೆ ಪ್ರಾ.ಕ್ರ.ಪ.ಸ.ಸಂಘ ನಿ. ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಆರ್ಯಾಪು ಗ್ರಾ. ಪಂ. ಮಾಜಿ ಸದಸ್ಯ ಹಮೀದ್ ಆಲೀಸ್ ಸಂಟ್ಯಾರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಸ್ಪರ್ಧೆಯ ವಿವರ:
ವಾಲಿಬಾಲ್:
ಪ್ರಥಮ – ರೂ. 5,001/- ಹಾಗೂ ಸಹ್ಯಾದ್ರಿ ಟ್ರೋಫಿ
ದ್ವಿತೀಯ -ರೂ. 4.001/- ಹಾಗೂ ಸಹ್ಯಾದ್ರಿ ಟ್ರೋಫಿ
ಹಗ್ಗಜಗ್ಗಾಟ:
ಪ್ರಥಮ – ರೂ. 5,001/- ಹಾಗೂ ಸಹ್ಯಾದ್ರಿ ಟ್ರೋಫಿ
ದ್ವಿತೀಯ -ರೂ. 4.001/- ಹಾಗೂ ಸಹ್ಯಾದ್ರಿ ಟ್ರೋಫಿ
ತೃತೀಯ – ರೂ. 3,001/- ಹಾಗೂ ಸಹ್ಯಾದ್ರಿ ಟ್ರೋಫಿ
ಚತುರ್ಥ – ರೂ. 2.001/- ಹಾಗೂ ಸಹ್ಯಾದ್ರಿ ಟ್ರೋಫಿ
ಇನ್ನಿತರ ಆಟಗಳು:
ಪುರುಷರಿಗೆ:
ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆಎಳೆತ, ಉಪ್ಪುಮೂಟೆ ಗೋಣಿಚೀಲ ಓಟ, ಅಪ್ಪಂಗಾಯಿ ಓಟ, ಮೂರು ಕಾಲಿನ ಓಟ
ಮಹಿಳೆಯರಿಗೆ :
ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆಎಳೆತ, ಉಪ್ಪುಮೂಟೆ, ಗೋಣಿಚೀಲ ಓಟ
1ರಿಂದ 5ನೇ ತರಗತಿವರೆಗಿನ ಬಾಲಕ ಬಾಲಕಿಯರಿಗೆ:
ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆಎಳೆತ, ಉಪ್ಪುಮೂಟೆ
5ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ:
ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆಎಳೆತ, ಉಪ್ಪುಮೂಟೆ, ಗೋಣಿಚೀಲ ಓಟ, ಕಂಬ ಸುತ್ತುವ ಓಟ
ಸಾರ್ವಜನಿಕರಿಗೆ ನಿಧಿಶೋಧನೆ, ಕೆಸರುಗದ್ದೆಯಲ್ಲಿ “ರಾಜ” ಹಾಗೂ ಕೆಸರುಗದ್ದೆಯಲ್ಲಿ “ರಾಣಿ” ಪ್ರತಿ ಸ್ಪರ್ಧೆಯಲ್ಲಿ ಗೆದ್ದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು.

(ಪುರುಷರಿಗೆ, ಮಹಿಳೆಯರಿಗೆ ಮಡಿಕೆ ಹೊಡೆಯುವ ಸ್ಪರ್ಧೆ ನಡೆಯಲಿರುವುದು.)








