Saturday, September 26, 2026
spot_imgspot_img
spot_imgspot_img

ಶ್ರೀಲಂಕಾದ ಜೈಲಿನಲ್ಲಿ ಹಿಂಸಾಚಾರ: ಆರು ಮಂದಿ ಬಲಿ

- Advertisement -
- Advertisement -

ಕೊಲಂಬೋ: ಶ್ರೀಲಂಕಾದ ರಾಜಧಾನಿ ಕೊಲಂಬೊ ಹೊರವಲಯದಲ್ಲಿರುವ ಜೈಲಿನಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಆರು ಕೈದಿಗಳು ಮೃತಪಟ್ಟಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಈ ಕೈದಿಗಳು ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಕೈದಿಗಳಿಗೆ ಗಾಯಗಳಾಗಿವೆ.

ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚಿನ ಸೌಲಭ್ಯ ನೀಡುವಂತೆ ಕೈದಿಗಳು ಆಗ್ರಹಿಸಿದ್ದರು. ಜೈಲಿನಲ್ಲಿನ ಅವ್ಯವಸ್ಥೆಯಿಂದಾಗಿ ರೋಗ ಹರಡುತ್ತಿದೆ ಎಂದು ಆರೋಪಿಸಿದ್ದರು. ಕೊಲಂಬೋದ ಜೈಲುಗಳಲ್ಲಿ ಅತ್ಯಧಿಕ ಸಂಖ್ಯೆಯ ಕೈದಿಗಳನ್ನು ಕೂಡಿ ಹಾಕಲಾಗಿದೆ.

ಐದು ಜೈಲುಗಳಲ್ಲಿ 10000 ಕೈದಿಗಳನ್ನು ಇರಿಸಲು ಸ್ಥಳ ಇದ್ದರೂ 26,000ಕ್ಕೂ ಹೆಚ್ಚು ಕೈದಿಗಳನ್ನು ಇಲ್ಲಿ ಇರಿಸಲಾಗಿದೆ. ಪೊಲೀಸರು ಕೈದಿಗಳ ಮೇಲೆ ಮನ ಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

Related news

error: Content is protected !!