Friday, April 26, 2024
spot_imgspot_img
spot_imgspot_img

ಅಮೆಜಾನ್‌ ಕಾಡಿನಲ್ಲಿ ವಿಸ್ಮಯಕಾರಿ “ಸ್ನೇಕ್‌ ಕ್ಯಾಟ್‌” ಪತ್ತೆ..!!

- Advertisement -G L Acharya panikkar
- Advertisement -
vtv vitla

ನಿಗೂಢ ಹಾಗೂ ದಟ್ಟ ಕಾನನ ಅಮೆಜಾನ್‌ ಕಾಡಿನಲ್ಲಿ ಆಗಾಗ ವಿಚಿತ್ರ ಪ್ರಾಣಿಗಳು ಪತ್ತೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗುತ್ತಿರುತ್ತವೆ. ಇದೀಗ ʼಅಮೆಜಾನ್ ಸ್ನೇಕ್ ಕ್ಯಾಟ್ʼ ಎಂಬ ಬೆಕ್ಕಿನ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಟ್ಟಿಟರ್‌ನಲ್ಲಿ ವೈರಲ್‌ ಆಗಿರುವ ಈ ಫೋಟೋದಲ್ಲಿರುವ ಬೆಕ್ಕನ್ನು, “ಸರ್ಪನ್ಸ್ ಕ್ಯಾಟಸ್” ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಅಪರೂಪದ ಬೆಕ್ಕಿನ ಜಾತಿಯಾಗಿದೆ. ಈ ಪ್ರಾಣಿಗಳು ಅಮೆಜಾನ್ ಮಳೆಕಾಡಿನಲ್ಲಿ ಮನುಷ್ಯರೂ ಸಹ ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದ್ದರಿಂದ ಅವುಗಳು ಮಾನವರ ಕಣ್ಣಿಗೆ ಬೀಳುವುದು ಅತೀ ಕಡಿಮೆ.

ಈ ಚಿತ್ರವನ್ನು ಮಾರ್ಚ್ 14 ರಂದು @Kamara2R ಎಂಬ ಬಳಕೆದಾರರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದುವರೆಗೆ, ಪೋಸ್ಟ್ ಸುಮಾರು 21 ಸಾವಿರ ವೀಕ್ಷಣೆಗಳನ್ನು ಪಡೆದಿದೆ. 150 ಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಲಾಗಿದೆ. ಈ ಚಿತ್ರಕ್ಕೆ ಹಲವು ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು ಇದು ಬೆಕ್ಕುಗಳ ಜಾತಿಯಲ್ಲ, ಫೋಟೋಶಾಪ್‌ನಿಂದ ಈ ರೀತಿ ಡಿಸೈನ್‌ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಈ ಚಿತ್ರವನ್ನು ನಕಲಿ ಎಂದು ದೂರಿದ್ದಾರೆ.

- Advertisement -

Related news

error: Content is protected !!