Sunday, August 2, 2026
spot_imgspot_img
spot_imgspot_img

ಕಾಸರಗೋಡು: ಕಾಡುಪ್ರಾಣಿಗಳ ಬೇಟೆಗೆ ತೆರಳಿದ್ದ ಮೂವರ ಬಂಧನ

- Advertisement -
- Advertisement -

ಕಾಸರಗೋಡು: ಕಾಡುಪ್ರಾಣಿಗಳ ಬೇಟೆಗೆ ತೆರಳಿದ್ದ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರಿಂದ ನಾಡ ಕೋವಿ ಹಾಗೂ ಐದು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಕುತ್ತಿಕೋಲ್ ನ ಸಮೀರ್, ನಿತಿನ್ ರಾಜ್ (25) , ರತೀಶ್ (26) ಮತ್ತು ಕೊಂಬನಡ್ಕ ದ ಪ್ರವಿತ್ (26) ಎಂದು ಗುರುತಿಸಲಾಗಿದೆ.

ವರ್ಕಾಡಿ ಮಜೀರ್ ಪಳ್ಳದಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಇವರನ್ನು ಪ್ರಶ್ನಿಸಿದಾಗ ಇವರ ಬಳಿ ಕೋವಿ, ಗುಂಡುಗಳು ಪತ್ತೆಯಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!