




ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕಿಮ್ ನಲ್ಲಿ 9 ತಿಂಗಳು 1000/- ಪಾವತಿಸಿ ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಅವಧಿಗೆ ದುಡ್ಡನ್ನು ಸ್ವೀಕರಿಸಿ ಈ ಮಧ್ಯೆ 9 ತಿಂಗಳು 1000/- ಪಾವತಿಸಿ ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಲಕ್ಕಿ ಸ್ಕಿಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 4 ಕೋಟಿ 20 ಲಕ್ಷಕ್ಕೂ ಮೀರಿದ 3 ಸಾವಿರ ಜನರಿಗೆ ಲಕ್ಕಿ ಸ್ಟೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಛೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ್ದುಆರೋಪಿಗಳಾದ 1.ಅಹಮ್ಮದ್ ಖುರೇಶಿ, ಪ್ರಾಯ 34 ವರ್ಷ, ತಂದೆ: ಅಬ್ಬುಬಕ್ಕರ್, ವಾಸ: ಜಿ.ಎಲ್ 1/54, 1ನೇ ಬ್ಲಾಕ್, ನಿಯರ್ ಮಹಕಾಳಿ ದೈವಸ್ಥಾನ, ಕಾಟಿಪಳ್ಳ,ಸುರತ್ಕಲ್, ಮಂಗಳೂರು ತಾಲೂಕು, ದ.ಕ ಜಿಲ್ಲೆ, 2.ನಝೀರ್ @ ನಾಸೀರ್, ಪ್ರಾಯ 39 ವರ್ಷ, ತಂದೆ: ದಿ||ಪಿ.ಐ ಹಸನಬ್ಬ, ವಾಸ: ಜಿ.ಎಲ್. 2/7, 2ನೇ ಬ್ಲಾಕ್, ಕಾಟಿಪಳ್ಳ, ನಿಯರ್ ಕೋರ್ದಬ್ಬು ದ್ವಾರ, ಸುರತ್ಕಲ್ ಮಂಗಳೂರು ತಾಲೂಕು, ದ.ಕ ಜಿಲ್ಲೆ ರವರ ವಿರುದ್ಧ ಶ್ರೀಶಿವ ಪ್ರಸಾದ್, ಪ್ರಾಯ 38 ವರ್ಷ, ತಂದೆ: ಆನಂದ ಸಾಲ್ಯಾನ್, ವಾಸ: ಮನೆ ನಂಬ್ರ 2/53/6, ಚಂದ್ರವತಿ ನಿಲಯ, ಪೊನ್ನಗಿರಿ ರಸ್ತೆ, ಸೂರಿಂಜೆ ಗ್ರಾಮ, ಸುರತ್ಕಲ್, ಮಂಗಳೂರು ತಾಲೂಕು, ದ.ಕ ಜಿಲ್ಲೆ ರವರು ದೂರು ನೀಡಿದ್ದು ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸುಮಾರು 4 ಕೋಟಿ 20 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದು, ನಂಬಿಕೆ ದ್ರೋಹ, ವಂಚನೆಗೈದ ಬಗ್ಗೆ ದಿನಾಂಕ: 16.08.2025 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2025 0 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ (BUDS Act) ರಂತೆ ಪ್ರಕರಣ ದಾಖಲಾಗಿರುತ್ತದೆ.








