




ಮಂಗಳೂರು: ಮನೆಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಎಂಬ ಜುಗಾರಿ ಆಟವಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೆರೆಗೆ ಪೊಲೀಸ್ ದಾಳಿ ನಡೆಸಿದ್ದು, ದಾಳಿ ವೇಳೆ ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳ ಹಾಗೂ ಮನೆ ಮಾಲೀಕರು ಮತ್ತು ಬಾಡಿಗೆದಾರರ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ದೇರೆಬೈಲ್ ಕೊಂಚಾಡಿ ದಿಕ್ಷೀತ್, ಕೊಂಚಾಡಿ ದಯಾನಂದ, ದೆರೆಬೈಲ್ ಕೊಂಚಾಡಿ ಯಯ್ಯಾಡಿ ಅಂಚೆ ರಾಘವೇಂದ್ರ, ಯಯ್ಯಾಡಿ ವೈಶಾಕ್ ಶೆಟ್ಟಿ, ಫರಂಗಿ ಪೇಟೆ ಪ್ರವೀಣ್ ಕುಮಾರ್, ಕಾಪು ಶಾಹುಲ್ ಹಮೀದ್, ನಡುಗೋಡು ಕಟೀಲು ಬಜಪೆ ತಿಲಕ್ ರಾಜ್, ವಾಮಂಜೂರು ಜಯಾನಂದ್ ಎಸ್, ದೇರೆಬೈಲ್ ಕೊಂಚಾಡಿ ಉಮೇಶ್, ದೇರೆಬೈಲ್ ಕೊಂಚಾಡಿ ಗೌತಮ್, ಕೂಳೂರು ಲಾರೆನ್ಸ್ ರಾಜಾ ಡಿ ಸೋಜಾ, ಇನಸ್ ಡಿಸೋಜಾ ಹೊಯ್ಗೆ ಗದ್ದೆ ಉಲ್ಲಾಳ, ಮುಹಮ್ಮದ್ ಅಶ್ರಫ್ ಉಲ್ಲಾಳ ಬೈಲ್, ಪೆರ್ಮನೂರ್ ಮೊಹಮ್ಮದ್ ಫಯಾಜ್, ಉಲ್ಲಾಳ ಮುಸ್ತಾಫಾ, ಅಡಮ್ ಕುದ್ರು ಪಡಪು ಅಡಮ್ ಕುದ್ರು ಪಡಪು, ರಾಮನಾಡು ಜಿಲ್ಲೆ ತಮಿಳುನಾಡು ಜಿಲ್ಲೆ ಕಣ್ಣನ್ ಎಂದು ಗುರುತಿಸಲಾಗಿದೆ.
ಆ.30ರಂದು ರಾತ್ರಿ 11-30 ಗಂಟೆಯ ಸಮಯ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗರವರ ಮಾಹಿತಿಯಂತೆ ಕಾವೂರು ಪೊಲಿಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮಲ್ಲಿಕಾರ್ಜುನ ಬಿರಾದಾರರವರು ಸಿಬ್ಬಂದಿಗಳೊಂದಿಗೆ ಕಾವೂರು ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಬೊಲ್ಪುಗುಡ್ಡೆ ಗ್ರಾಮದಲ್ಲಿ ಮನೆ ನಂಬ್ರ: 5-120/5(8) ಮನೆಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಎಂಬ ಜುಗಾರಿ ಆಟವಾಡುತ್ತಿದ್ದ ವೇಳೆ ದಾಳಿ ನಡೆಸಿದ್ದು, ದಾಳಿ ವೇಳೆ ಆರೋಪಿಗಳಿಂದ ಒಟ್ಟು 1,92,000/- ರೂ ನಗದು ಹಣವನ್ನು ಹಾಗೂ ಸದ್ರಿಯವರುಗಳಿಂದ 18 ಮೊಬೈಲ್ ಫೋನ್ಗಳನ್ನು ಸ್ವಾಧೀನಾಪಡಿಸಿಕೊಂಡಿದ್ದು , ಸೊತ್ತುಗಳ ಒಟ್ಟು ಮೌಲ್ಯ ಸುಮಾರು 4,00,000/- ರೂಗಳು ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ಹಾಗೂ ಮನೆ ಮಾಲೀಕರು ಮತ್ತು ಬಾಡಿಗೆದಾರರ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಕಾವೂರು ಪೊಲೀಸ್ ಠಾಣಾ ಅ.ಕ್ರ: 129/2025 ಕಲಂ: 78 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು 112 ಭಾರತೀಯ ನ್ಯಾಯ ಸಂಹಿತೆ-2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಎಂಬ ಜುಗಾರಿ ಆಟವಾಡುತ್ತಿದ್ದ ಸ್ಥಳಕ್ಕೆ ವಿಶೇಷ ಕಾರ್ಯಚರಣೆ ನಡೆಸುವಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ ಕೆ ರವರ ಮಾಹಿತಿಯಂತೆ ಮತ್ತು ಕಾವೂರು ಠಾಣಾ ಪಿಎಸ್ಐ ಶ್ರೀ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಯವರಾದ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.








