Tuesday, April 30, 2024
spot_imgspot_img
spot_imgspot_img

ವಿದೇಶಗಳಲ್ಲಿ ಭಾರತೀಯ ಅಗರಬತ್ತಿ ಘಮ

- Advertisement -G L Acharya panikkar
- Advertisement -

ಬೆಂಗಳೂರು: ಭಾರತೀಯ ಅಗರಬತ್ತಿ ಉದ್ಯಮ ವಿದೇಶಗಳಲ್ಲೂ ಕ್ಷಿಪ್ರಗತಿಯಲ್ಲಿ ಬೆಳೆದಿದ್ದು. ಕಳೆದ 10 ತಿಂಗಳಲ್ಲಿ ದಾಖಲೆಯ ವಹಿವಾಟು ನಡೆಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದ ರಫ್ತಿನಲ್ಲೂ ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ ಎಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ ಅಧ್ಯಕ್ಷ ಅರ್ಜುನ್ ರಂಗಾ ಹೇಳಿದ್ದಾರೆ.

ಬುಧವಾರ(ಡಿ.2)ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ ಈ ವರ್ಷ ಕೇವಲ 10 ತಿಂಗಳಲ್ಲೇ ದಾಖಲೆಯ ವಹಿವಾಟು ನಡೆದಿದೆ. ಅಮೆರಿಕ, ಇಂಗ್ಲೆಂಡ್, ಮಲೇಷಿಯಾ, ನೈಜೀರಿಯಾ ರಾಷ್ಟ್ರಗಳು ಅಗರಬತ್ತಿ ಹಾಗೂ ಸಂಬಂಧಿತ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಿದೆ ಎಂದರು.

ಭಾರತದಲ್ಲಿ ತಯಾರಾಗುವ ಅಗರಬತ್ತಿಯನ್ನು 150ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ಸುಗಂಧ ದ್ರವ್ಯ, ಗುಣಮಟ್ಟದ ಪ್ಯಾಕೇಜಿಂಗ್ ಕ್ರಮ ಗ್ರಾಹಕರ ಮನಸೂರೆಗೊಳಿಸುತ್ತಿದೆ ಎಂದರು.

- Advertisement -

Related news

error: Content is protected !!