- Advertisement -
- Advertisement -



ಹೊಸದಿಲ್ಲಿ: ಅಪರೂಪದ ಸಂಪೂರ್ಣ ರಕ್ತ ಚಂದ್ರಗ್ರಹಣ ಇದೇಸೆ.7ರಂದು ಸಂಭವಿಸಲಿದ್ದು, ಭಾರತ ಸೇರಿ ಬಹುತೇಕ ವಿಶ್ವಾದ್ಯಂತ ಗೋಚರವಾಗಲಿದೆ. ಈ ಅಪರೂಪದ ವಿದ್ಯಮಾನ ವು 82 ನಿಮಿಷ ನಡೆಯಲಿದೆ. ಈ ಚಂದ್ರಗ್ರಹಣ ದಶಕದ ಅತ್ಯಂತ ಮಹತ್ವದ ಖಗೋಳ ಕೌತುಕವಾಗಿದೆ.
ಸೆ.7ರಂದು ಭಾರತೀಯ ಕಾಲಮಾನ ರಾತ್ರಿ 8.58ರಿಂದ ಗ್ರಹಣ ಆರಂಭವಾಗಿ ಅಂದು ತಡ ರಾತ್ರಿ 12.22ರವರೆಗೆ ಇರಲಿದೆ. ಗ್ರಹಣದ ಸಮಯ ದಲ್ಲಿ ಚಂದ್ರನು ರಕ್ತ ಕೆಂಪು ಬಣ್ಣದಲ್ಲಿ ಗೋಚರಿಸುವ ಕಾರಣ ಈ ಹೆಸರಿದೆ.
- Advertisement -








