- Advertisement -
- Advertisement -
ರಾಯಚೂರು: ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದ ಬಾಲಕನೊಬ್ಬ ಮೊಸಳೆಗೆ ಆಹುತಿಯಾಗಿದ್ದಾನೆ. ರಾಯಚೂರು ಜಿಲ್ಲೆಯ ಡಾಂಗರಾಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಮೊಸಳೆಗೆ ದಾಳಿಗೆ ಸಿಲುಕಿ ಮೃತಪಟ್ಟ ಬಾಲಕನನ್ನು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಬಾಯಾರಿದಾಗ ನೀರು ಕುಡಿಯಲು ಮಲ್ಲಿಕಾರ್ಜುನ ನದಿಗೆ ತೆರಳಿದ್ದ. ಈ ಸಂದರ್ಭದಲ್ಲಿ ದಾಳಿ ನಡೆಸಿದ ಮೊಸಳೆ ಬಾಲಕನನ್ನು ಬಲಿಪಡೆದಿದೆ. ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.



- Advertisement -








