Tuesday, July 28, 2026
spot_imgspot_img
spot_imgspot_img

ಹಾಸನ: ಹೊತ್ತಿ ಉರಿದ ಲಾರಿ – ಮೂವರ ಸಜೀವ ದಹನ

- Advertisement -
- Advertisement -

ಹಾಸನ: ರಾಸಾಯನಿಕ ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ, ಬೆಂಕಿಯಿಂದ ಹೊತ್ತಿ ಉರಿದ ಪರಿಣಾಮ ಮೂವರು ಸಾವನ್ನಪ್ಪಿದ ದಾರುಣ ಘಟನೆ ಹಾಸನದಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಲಾರಿ ಚಾಲಕ ಪುಟ್ಟರಾಜು (42), ಪ್ರಮೋದ್(18) ಹಾಗೂ ಪರಮೇಶ್(40) ಮೃತ ದುರ್ದೈವಿಗಳು.

ಲಾರಿ ಮೈಸೂರಿನಿಂದ ಹಾಸನದ ಹಿಮತ್ ಸಿಂಗ್ ಬಟ್ಟೆ ಕಾರ್ಖಾನೆಗೆ ವಿಷಕಾರಿ ಪೌಡರ್ ಚೀಲಗಳು ಹಾಗೂ ಕೆಮಿಕಲ್ ಬಾಕ್ಸ್​ಗಳನ್ನು ಹೊತ್ತು ಬರುತ್ತಿತ್ತು. ಈ ವೇಳೆ ಅರಕಲಗೂಡು ತಾಲೂಕಿನ ಬಸವನಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಕಲಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!