- Advertisement -
- Advertisement -



ಪುತ್ತೂರು ಸೆಪ್ಟೆಂಬರ್ 09: ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರನ್ನು ಸಂಪಾಜೆಯಲ್ಲಿ ಇಂದು ಮುಪೊಲೀಸರು ವಶಕ್ಕೆ ಪಡೆದಿದ್ದರು.ಪೆರ್ನೆಯಲ್ಲಿ ನಡೆದ ಹಟ್ಟಿಯಲ್ಲಿ ದನ ಕದ್ದು ಮಾಂಸ ಮಾಡಿ ಸಾಗಾಟ ವಿಚಾರದಲ್ಲಿ ಸುಳ್ಳು ಸುದ್ಧಿ ಹರಡಿರುವ ಆರೋಪದ ಮೇಲೆ ಪೊಲೀಸರು ಸಂಪಾಜೆಯಲ್ಲಿ ನರಸಿಂಹ ಮಾಣಿಯನ್ನು ಅರೆಸ್ಟ್ ಮಾಡಿದ್ದಾರೆ.
ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಹಿಂಜಾವೇ ಮುಖಂಡನ ಬಂಧನಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿತ್ತು.ಬಂಟ್ವಾಳದ ನ್ಯಾಯಾಲಯದಲ್ಲಿ ನರಸಿಂಹ ಮಾಣಿಯವರಿಗೆ ಜಾಮೀನು ಮಂಜೂರಾಗಿದೆ.ನ್ಯಾಯಾಲಯವು ಜಾಮೀನು ನೀಡಿದೆ.ನರಸಿಂಹ ಮಾಣಿ ಅವರ ಪರವಾಗಿ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ವಾದ ಮಂಡಿಸಿದರು.
- Advertisement -








