Monday, July 27, 2026
spot_imgspot_img
spot_imgspot_img

ಹಬ್ಬ ,ಉತ್ಸವ, ಮೆರವಣಿಗೆಗಳಿಗೆ ಪೊಲೀಸ್‌ ಇಲಾಖೆಯಿಂದ ಸಮಸ್ಯೆ ಆಗಿಲ್ಲ: ಸುಧೀ‌ರ್ ಕುಮಾರ್ ರೆಡ್ಡಿ

- Advertisement -
- Advertisement -

ಮಂಗಳೂರು: ಸಾರ್ವಜನಿಕವಾಗಿ ಆಚರಣೆ ಮಾಡುವ ಯಾವುದೇ ಹಬ್ಬಗಳಿಗೆ, ಮೆರವಣಿಗೆಗಳಿಗೆ ಪೊಲೀಸ್‌ ಇಲಾಖೆ ಅಡ್ಡಿ ಮಾಡಿಲ್ಲ. ಬೇರೆಯವರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ‘ಶಬ್ದದ ಮಿತಿ’ ನಿಗದಿ ಮಾಡಲಾಗಿದ್ದು, ಅದನ್ನು ಅನುಸರಿಸಿಕೊಂಡು ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಗಣೇಶೋತ್ಸವ ಮೆರವಣಿಗೆಗಳು ತಂಡ ರಾತ್ರಿಯ ವರೆಗೆ ನಡೆದಿದ್ದು, ಅಲ್ಲಿ ಯಾವ ಸಮಸ್ಯೆಯೂ ಆಗಿಲ್ಲ. ಪೊಲೀಸರು ಸಮಸ್ಯೆ ಮಾಡಿಲ್ಲ. ಆದರೆ ಶಬ್ದ ಮಿತಿಯನ್ನು ಮಾತ್ರ ಹಾಕಲಾಗಿತ್ತು ಎಂದು ತಿಳಿಸಿದ್ದಾರೆ.ಮನರಂಜನಾ ಕಾರ್ಯಕ್ರಮ, ಯಕ್ಷಗಾನಗಳಿಗೂ ಇದೇ ಮಿತಿ ಸೂಚಿಸಲಾಗಿದ್ದು, ಕಾರ್ಯಕ್ರಮ ನಡೆಯುವಲ್ಲಿ ಎಷ್ಟು ಜನರು ಸೇರುತ್ತಾರೆಯೋ ಆ ವ್ಯಾಪ್ತಿಗೆ ಅನುಗುಣವಾಗಿ ಶಬ್ದ ಬಳಸುವಂತೆ ಹೇಳಲಾಗಿತ್ತು. ಅದರ ಹೊರತಾಗಿ ಇತರರಿಗೆ ತೊಂದರೆಯಾಗದಂತೆ ಹೆಚ್ಚು ಶಬ್ದ ಬಳಸದಂತೆ ಸೂಚನೆ ಇತ್ತು ಎಂದು ಹೇಳಿದ್ದಾರೆ.

- Advertisement -

Related news

error: Content is protected !!