Saturday, September 5, 2026
spot_imgspot_img
spot_imgspot_img

ಬೈಕ್ ಮೇಲೆ ಕಡವೆ ಹಾರಿ ಯುವಕ ಮೃತ್ಯು, ಮತ್ತೋರ್ವ ಗಂಭೀರ

- Advertisement -
- Advertisement -

ಕುಂದಾಪುರ: ಕಮಲಶಿಲೆಯಿಂದ ನೆಲ್ಲಿಕಟ್ಟೆಯ ಕಡೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಕಡವೆ ಹಾರಿ ಬೈಕ್ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ಕಮಲಶಿಲೆ ಸಿದ್ದಾಪುರ ಮುಖ್ಯ ರಸ್ತೆಯ ತಾರೆಕೊಡ್ಲು ಬಳಿ ನಡೆದಿದೆ.ಮೃತ ಯುವಕ ನೆಲ್ಲಿಕಟ್ಟೆ ನಿವಾಸಿ ಶ್ರೇಯಸ್ ಮೊಗವೀರ(22) ಎಂದು ತಿಳಿದು ಬಂದಿದೆ.ಗಂಭೀರ‌ ಗಾಯಗೊಂಡ ಯುವಕ ವಿಪ್ಪೇಶ್(19) ಎಂದು ತಿಳಿದು ಬಂದಿದೆ.ಇವರು ಬೈಕ್ ನಲ್ಲಿ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ತಾರೆಕೊಡ್ಲು ಬಳಿ ಕಡೆವೆ ಬೈಕ್ ಮೇಲೆ ಹಾರಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಬೈಕ್ ನಜ್ಜು ನುಜ್ಜಾಗಿದ್ದು ಕಡವೆ ಕೂಡ ಸ್ಥಳದಲ್ಲೇ ಮೃತಪಟ್ಟಿದೆ. ಶ್ರೇಯಸ್ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಗಂಭೀರ ಗಾಯಗೊಂಡಿದ್ದ‌ ವಿಪ್ಪೇಶ್ ನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!