- Advertisement -
- Advertisement -



ವಿಟ್ಲ: ಸೀತಾಲಕ್ಷ್ಮೀ ವರ್ಮ ವಿಟ್ಲ ಅರಮನೆ ಬರೆದ ‘ಬಣ್ಣ ಬಣ್ಣದ ಬಿಂದಿಗಳು’ ಕಾವ್ಯ ಕೃತಿಯ ಲೋಕಾಪಣೆ ಕಾರ್ಯಕ್ರಮ ಸಪ್ಟೆಂಬರ್ 25ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಡಾ.ಎಂ.ಜಿ.ಆರ್ ಅರಸು ವೈದ್ಯವಾರ್ತಾ ಪ್ರಕಾಶನದ ಈ ಕೃತಿಯನ್ನು ನಾಡಿನ ಹಿರಿಯ ವಿದ್ವಾಂಸ ಹಾಗೂ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಸಿ.ಪಿ.ಕೆ ಲೋಕಾರ್ಪಣೆಗೈಯಲಿದ್ದಾರೆ.
ವಿಧಾನ ಪರಿಷತ್ತು ಸದಸ್ಯ ಡಾ. ಡಿ .ತಿಮ್ಮಯ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ .ಶಿಕ್ಷಣ ತಜ್ಞೆ ಭ್ರಮರ ಬಹದ್ದೂರ್ ಕೃತಿಯ ಕುರಿತು ಮಾತನಾಡಲಿದ್ದು, ರಂಗಾಯಣ ಸದಸ್ಯರಾದ ಹೆಚ್. ಸುರೇಶ್ ಬಾಬು ಪುಸ್ತಕ ತಾಂಬೂಲ ಸಮರ್ಪಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ .ಎಸ್ ಸತೀಶ್, ಚುಟುಕು ಸಿರಿ ಡಾ. ರತ್ನಹಾಲಪ್ಪ ಗೌಡ ,ಅನ್ವೇಷಣಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಆರ್ಯ ಅಮರನಾಥ ರಾಜೇ ಅರಸು ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
- Advertisement -








