Sunday, June 7, 2026
spot_imgspot_img
spot_imgspot_img

ಕಬಕ: ಕಲ್ಲಿನ ಕೋರೆಯ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು

- Advertisement -
- Advertisement -

ಕಬಕ: ತೆರೆದ ಕಲ್ಲಿನ ಕೋರೆಯ ಹೊಂಡಕ್ಕೆ ಸ್ನೇಹಿತರೊಂದಿಗೆ ಸ್ಥಾನಕ್ಕೆ ತೆರಳಿದ ಬಾಲಕ ನೀರು ತುಂಬಿದ ಕೊರೆ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಕಬಕ ಇಲ್ಲಿನ ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ಕಬಕ ನಿವಾಸಿ ಹಸೈನ್‌ ಎಂಬವರ ಪುತ್ರ ಮಹಮ್ಮದ್‌ ಅಜ್ಮಾನ್ (15)ಎಂದು ಗುರುತಿಸಲಾಗಿದೆ.

ಕಬಕ ಪರಿಸರದ ನಾಲ್ವರು ಬಾಲಕರು ಕಬಕ ಹತ್ತಿರದ ಕುಳ ಗ್ರಾಮದ ಕಲ್ಲಂದಡ್ಕ ನೀರು ತುಂಬಿದ ಕೊರೆ ಹೊಂಡಕ್ಕೆ ಸ್ಥಾನ ಕ್ಕೆ ತೆರಳಿದ್ದರು. ಅಜ್ಮಾನ್ ಹೊಂಡದ ನೀರಲ್ಲಿ ಮುಳುಗಿದ್ದಾನೆ .ಅಲ್ಲಿಂದ ಓಡಿದ ಅವನ ಸ್ನೇಹಿತರು ಸ್ಥಳೀಯರಲ್ಲಿ ಘಟನೆಯ ವಿಷಯ ತಿಳಿಸಿದ್ದಾರೆ . ವಿಷಯ ತಿಳಿದ ತಕ್ಷಣ ಬಂದು ಬಾಲಕನನ್ನು ನೀರಿನಿಂದ ಹೊರ ತೆಗೆದು ಆಸ್ಪತ್ರೆ ತಲುಪಿಸುವಷ್ಟರಲ್ಲಿ ಯುವಕ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಮೃತ ಬಾಲಕ ಪುತ್ತೂರು ಖಾಸಾಗಿ ಶಾಲೆಯ 10ನೇ ತರಗತಿ ವಿಧ್ಯಾರ್ಥಿ ಎಂದು ತಿಳಿದು ಬಂದಿದೆ. ವಿಟ್ಲ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು ಪೋಲೀಸರು ಮುಂದಿನ ತನಿಖೆ ನಡೆಸುತಿದ್ದಾರೆ.

- Advertisement -

Related news

error: Content is protected !!