Saturday, August 29, 2026
spot_imgspot_img
spot_imgspot_img

ನಟ ಉಪೇಂದ್ರ, ಪ್ರಿಯಾಂಕಾ ದಂಪತಿಯ ಮೊಬೈಲ್ ಹ್ಯಾಕ್ ಕೇಸ್: ಹ್ಯಾಕರ್ ಗಳ ಮೂಲ ಪತ್ತೆ

- Advertisement -
- Advertisement -

ಬೆಂಗಳೂರು: ನಟ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್‌ ಗಳ ಮೂಲ ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಆರೋಪಿಗಳು ಬಿಹಾರದಿಂದಲೇ 4–5 ಜನರಿಂದ ಉಪೇಂದ್ರ ದಂಪತಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಹಣ ಕೇಳಿದ್ದು, ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, 4 ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.ಆ ನಾಲ್ಕು ಅಕೌಂಟ್ ಗಳು ಕೂಡ ನಕಲಿ ಆಗಿದ್ದು, ಅದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಕೆಲವರ ಮೊಬೈಲ್ ಗಳನ್ನು ಹ್ಯಾಕ್ ಮಾಡಿದ್ದಾರೆ.

- Advertisement -

Related news

error: Content is protected !!