- Advertisement -
- Advertisement -



ಕಾರ್ಕಳ : ಉದ್ಯಮಿ, ಕಾಂಟ್ರಾಕ್ಟರ್, ಹಿರ್ಗಾನ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಮೊಕೇಸರ ಅಶೋಕ್ ನಾಯಕ್ ಹಿರ್ಗಾನದ ಯಶವಂತ ನಾಯಕ್ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತ್ ನಾಯಕ್ ಹಿರ್ಗಾನ ಗ್ರಾಮದ ಮೂರೂರು ಎಂಬಲ್ಲಿರುವ ದುರ್ಗಾ ವೆಜೆಟೇಬಲ್ ಅಂಗಡಿ ಬಳಿ ತನ್ನ ಸ್ನೇಹಿತರಾದ ಶಂಕರ ನಾಯಕ್, ದಿನೇಶ್ ನಾಯಕ್ ಮತ್ತು ಸತೀಶ ಶೆಟ್ಟಿ ಎಂಬವರೊಂದಿಗೆ ಮಾತನಾಡುತ್ತಿರುವಾಗ ಆಪಾದಿತರಾದ ಅಶೋಕ್ ನಾಯಕ್ ಬಂದು ನನ್ನ ಬಗ್ಗೆ ವಾಟ್ಸಾಪ್‌ನಲ್ಲಿ ಮಾನಹಾನಿ ಪೋಸ್ಟ್ ಹಾಕುತ್ತೀಯ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಗದರಿ ಯಶವಂತ್ ಅವರ ಕೆನ್ನೆಗೆ ಹೊಡೆದು, ಜೀವ ಬೆದರಿಕೆ ಹಾಕಿರುವುದಾಗಿ ಯಶವಂತ್ ನಾಯಕ್ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಾಟ್ಸಾಪ್‌ನಲ್ಲಿ ಮಾನಹಾನಿ ಪೋಸ್ಟ್ ಹಾಕಿದ್ದಾರೆ ಎಂದು ಅಶೋಕ್ ನಾಯಕ್ ಪ್ರತಿದೂರು ದಾಖಲಿಸಿದ್ದಾರೆ.
- Advertisement -








