Friday, September 4, 2026
spot_imgspot_img
spot_imgspot_img

ವಿಟ್ಲ: ಕೆಂಪು ಕಲ್ಲು ಸಾಗಾಟ ಲಾರಿ-ಕಾರು ಡಿಕ್ಕಿ; ಇಬ್ಬರು ಅಪಾಯದಿಂದ ಪಾರು

- Advertisement -
- Advertisement -

ವಿಟ್ಲ, ಜೂನ್ 30: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವು ಸಮೀಪ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಅಪಾಯದಿಂದ ಪಾರಾಗಿದ್ದು, ಎರಡೂ ವಾಹನಗಳಿಗೆ ಹಾನಿಯಾಗಿದೆ.ಮಂಜೇಶ್ವರ ತಾಲೂಕಿನ ಕಾಸರಗೋಡು ನಿವಾಸಿ ಸುಬ್ರಹ್ಮಣ್ಯ ಭಟ್ (63) ಅವರು ಜೂನ್ 29ರಂದು ತಮ್ಮ ಕಾರಿನಲ್ಲಿ ಪ್ರಾಣೇಶ್ ಕುಮಾರ್ ಅವರನ್ನು ಕರೆದುಕೊಂಡು ಪೆರ್ಲ-ಅಡ್ಯನಡ್ಕ–ಕುದ್ದುಪದವು ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ ಸುಮಾರು 11 ಗಂಟೆಗೆ ಅಳಿಕೆ ಗ್ರಾಮದ ಬಿಲ್ಲಂಪದವು ಸಮೀಪ ಪೆರುವಾಯಿ ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕೆಂಪು ಕಲ್ಲು ಸಾಗಾಟದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.

ಲಾರಿ ಚಾಲಕ ರಾಮನಾಯ್ಕ ಅವರು ಲಾರಿಯನ್ನು ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಅಪಘಾತಕ್ಕೆ ಕಾರಣರಾದರು ಎಂದು ಸುಬ್ರಹ್ಮಣ್ಯ ಭಟ್ ಅವರು ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಸುಬ್ರಹ್ಮಣ್ಯ ಭಟ್ ಹಾಗೂ ಪ್ರಾಣೇಶ್ ಕುಮಾರ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಕಾರು ಮತ್ತು ಲಾರಿಗೆ ಹಾನಿಯಾಗಿದೆ.ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!