- Advertisement -
- Advertisement -




ಕೊಣಾಜೆ: ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆಬಸ್ ತಂಗುದಾಣದಲ್ಲಿ ಕೊಣಾಜೆ ಠಾಣೆಯ ಸರಕಳ್ಳತನದ ಆರೋಪಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮಾದಕ ಪದಾರ್ಥ ವ್ಯಸನದಿಂದ ಸಾವನ್ನಪ್ಪಿರುವ ಬಗ್ಗೆ ಶಂಕಿಸಲಾಗಿದೆ.ಮುದುಂಗಾರುಕಟ್ಟೆ ಬಳಿಯ ಪಾತೂರು ನಿವಾಸಿ ಮಹಮ್ಮದ್ ನಿಯಾಫ್ (28) ಸಾವನ್ನಪ್ಪಿರುವ ಯುವಕ.
ಇಂದು ಮಧ್ಯಾಹ್ನ ವ್ಯಕ್ತಿಯೋರ್ವರು ತಮ್ಮ ದ್ವಿಚಕ್ರ ವಾಹನವನ್ನು ಮುದುಂಗಾರು ಕಟ್ಟೆ ಬಸ್ ನಿಲ್ದಾಣದ ಬಳಿ ನಿಲ್ಲಿಸಲು ತೆರಳಿದಾಗ ಮೃತದೇಹ ಪತ್ತೆಯಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು.ಸ್ಥಳಕ್ಕೆ ಕೂಡಲೇ ಕೊಣಾಜೆ ಪೊಲೀಸರು ದೌಡಾಯಿಸಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
- Advertisement -








