Thursday, July 23, 2026
spot_imgspot_img
spot_imgspot_img

ವಿಟ್ಲ ತಾಲೂಕಿನ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ 501ನೇ ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ

- Advertisement -
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ವಿಟ್ಲಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ‘ಎ’, ವಿಟ್ಲ ‘ಬಿ’ ಮತ್ತು ಒಕ್ಕೆತ್ತೂರುಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಕೃಪಾ ಆಶೀರ್ವಾದಗಳೊಂದಿಗೆ ದಿನಾಂಕ 26-10-2025 ರಂದು ವಿಟ್ಲ ಸುವರ್ಣ ರಂಗಮಂದಿರ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ವಿಟ್ಲ ತಾಲೂಕಿನ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ 501ನೇ ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ ನಡೆಯಲಿದೆ.ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಉದ್ಘಾಟನೆ ಮಾಡಲಿದರೆ.

ವಿಟ್ಲ ವಲಯದ ಅಖಿಲ ಕರ್ನಾಟಕ ಜನಜಾಗೃತಿಯ ಸದಸ್ಯ ನಟೇಶ್ ವಕೀಲರು ವಿಟ್ಲ,ವಿಟ್ಲ ವಿಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಯೋಟು, ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರಾಧಾಕೃಷ್ಣ, 1722 ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ,ವಿಠಲ ಪ್ರೌಢ ಶಾಲಾ ವಿಭಾಗ ಉಪಪ್ರಾಂಶುಪಾಲ ಕಿರಣ್ ಕುಮಾರ್, ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ,ವಿಟ್ಲ ತಾಲೂಕು ಕೇಂದ್ರ ಒಕ್ಕೂಟ ಅಧ್ಯಕ್ಷ ನವೀನ್‌ ಚಂದ್ರ,ವಿಟ್ಲ ವಲಯ ಅಧ್ಯಕ್ಷ ಪ್ರಮೀಳಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!