Monday, July 20, 2026
spot_imgspot_img
spot_imgspot_img

ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ ವಿಟ್ಲ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಆಶ್ರಯದಲ್ಲಿ “ಬೃಹತ್ ಉಚಿತ ಆರೋಗ್ಯ ತಪಾಸಣಾ” ಹಾಗೂ “ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಶಿಬಿರ”

- Advertisement -
- Advertisement -

ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ ವಿಟ್ಲ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಆಶ್ರಯದಲ್ಲಿ ಸಮುದಾಯ ಕೇಂದ್ರ ವಿಟ್ಲ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಬೃಹತ್ ಅರೋಗ್ಯ ಶಿಬಿರ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್ ನೋಂದಣಿ ತಿದ್ದುಪಡಿ ಕಾರ್ಯಕ್ರಮವು ಮಂಗಳ ಮಂಟಪ ಶ್ರೀ ರಾಮ ನಗರ ಚಂದಳಿಕೆ ವಿಟ್ಲದಲ್ಲಿ ನಡೆಯಿತು.

ಕೃಷ್ಣಯ್ಯ ಕೆ ವಿಟ್ಲ ಅರಮನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಂಕರ ಭಟ್ ಬದನಾಜೆ ಅಧ್ಯಕ್ಷತೆ ವಹಿಸಿದ್ದರು ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್ ಕೆ, ಎಸ್ ಬಿ ಐ ಸೀನಿಯರ್ ಮೆನೇಜರ್ ಸನತ್ ಕುಮಾರ್ ಚಂದಳಿಕೆ, ವಿಟ್ಲ ಅಂಚೆ ಪಾಲಕ ಶಿವ ಕುಮಾರಿ, ಮಾರುಕಟ್ಟೆ ಅಧಿಕಾರಿ ಅಂಚೆ ಇಲಾಖೆ ಪುತ್ತೂರು ವಿಭಾಗ ಗುರುಪ್ರಸಾದ್ ಕೆ. ಎಸ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಶಮನ್ ಜೆ. ಶೆಟ್ಟಿ, ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ವೈದ್ಯಕೀಯ ತಜ್ಞ ಡಾ. ರವಿ ಶಂಕರ ಭಟ್, ಮುದೂರು ಅಧ್ಯಕ್ಷ ಕರುಣಾಕರ ಗೌಡ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ಗೌರವಧ್ಯಕ್ಷ ಗಂಗಾಧರ ಸಿ, ಕ್ಲಬ್‌ನ ಪದಾಧಿಕಾರಿಗಳು ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಆರುನೂರಕ್ಕೂ ಮಿಕ್ಕಿ ಸಾರ್ವಜನಿಕ ಬಂಧುಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಅಗತ್ಯ ಇದ್ದವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.

- Advertisement -

Related news

error: Content is protected !!