- Advertisement -
- Advertisement -





ಬೈಂದೂರು: ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಡುವರಿ ಗ್ರಾಮದ ಶೇಖರ(36) ಭಟ್ಕಳದ ಹರೀಶ್ ನಾಯ್ಕ(42), ದೇವಂದ್ರ ಜಟ್ಟಪ್ಪ ನಾಯ್(38), ಅಶೋಕ ವೆಂಕಟೇಶ ನಾಯ್ಕ(42), ನಾಗಪ್ಪ ಗೊವೀಂದ ನಾಯ್ಕ(45), ಶಿರೂರು ಗ್ರಾಮದ ದಿನಕರ(32) ಎಂದು ಗುರುತಿಸಲಾಗಿದೆ.
ಬಂಧಿತರಿಂದ 24010ರೂ. ನಗದು, ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








