Sunday, July 26, 2026
spot_imgspot_img
spot_imgspot_img

ಮುಂಬೈನ ಥಾಣೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಉಡುಪಿಯ ಯುವಕ ಸಾವು

- Advertisement -
- Advertisement -

ಉಡುಪಿ: ಮುಂಬೈನ ಥಾಣೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಉಡುಪಿ ಜಿಲ್ಲೆಯ ಕಲ್ಮಾಡಿಯಲ್ಲಿನ ಯುವಕನೋರ್ವ ಮೃತಪಟ್ಟಿದ್ದಾರೆ.

ಮೃತರನ್ನು ಉಡುಪಿಯ ಕಲ್ಮಾಡಿಯ ನಿವಾಸಿ ಇನಿಶ್ ಲಸ್ರಾದೊ ಎಂದು ಗುರುತಿಸಲಾಗಿದೆ. ಅವರು ಬೈಕ್ ಅಪಘಾತಕ್ಕೀಡಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನಿಶ್ ಅವರು ಕಳೆದ ಮೂರು ವರ್ಷಗಳಿಂದ ಥಾಣೆಯಲ್ಲಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ಚರ್ಚ್‌ನ ವಿವಿಧ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು.

ಅವರು ತಂದೆ ಅಪೊಲೊ, ತಾಯಿ ಐರೀನ್ ಮತ್ತು ಸಹೋದರಿ ಅಶ್ವಿನಿ ಲಸ್ರಾದೋ ಅವರನ್ನು ಅಗಲಿದ್ದಾರೆ.

- Advertisement -

Related news

error: Content is protected !!