- Advertisement -
- Advertisement -
ವಿಟ್ಲ: ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ವಿಟ್ಲದ ಇಡ್ಕಿದು ಗ್ರಾಮದ ಮಹಿಳೆ, ವಿಟ್ಲಕಸಬಾ ಗ್ರಾಮದ ಫಾತಿಮ ಬಿಲ್ಡಿಂಗ್‌ನಲ್ಲಿ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿ 6,000 ರೂ. ಡ್ರಾ ಮಾಡಿ ಹೊರಗಡೆ ಬರುತ್ತಿದ್ದ ಸಂದರ್ಭ, ಎಟಿಎಂ ಕೇಂದ್ರದ ಒಳಗಡೆಯಿದ್ದ ಅಪರಿಚಿತ ವ್ಯಕ್ತಿಗಳು ಮಹಿಳೆಯನ್ನು ಕರೆದು ಎಟಿಎಂ ಅನ್ನು ಸರಿಯಾಗಿ ಮುಚ್ಚಬೇಕೆಂದು ತಿಳಿಸಿದ್ದರೆನ್ನಲಾಗಿದೆ.


ಅದರಂತೆ ಮಹಿಳೆ ಕೇಂದ್ರದ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ ಅಪರಿಚಿತ ವ್ಯಕ್ತಿಗಳು ಕಾರ್ಡ್ ಬದಲಾಗಿದೆ ಎಂದು ತಿಳಿಸಿ ಮಹಿಳೆಯ ಕೈಯ್ಯಲ್ಲಿದ್ದ ಕಾರ್ಡನ್ನು ಬದಲಿಸಿದರು. ಮಹಿಳೆ ಮನೆಗೆ ಬಂದು ರಾತ್ರಿ ಮೊಬೈಲ್ ನೋಡುತ್ತಿದ್ದಂತೆ ಖಾತೆಯಿಂದ ಸುಮಾರು 1.19 ಲಕ್ಷ ರೂ. ವರ್ಗಾವಣೆಯಾಗಿರುವ ಬಗ್ಗೆ ಮೆಸೇಜ್ ಬಂದಿತ್ತು ಎಂದು ವಂಚನೆಗೊಳಗಾದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -








