Wednesday, August 5, 2026
spot_imgspot_img
spot_imgspot_img

ಉತ್ತರಪ್ರದೇಶ: ವೈದ್ಯಕೀಯ ಕೋರ್ಸ್ ನಂತರ 10 ವರ್ಷ ಸರ್ಕಾರಿ ಸೇವೆ ಕಡ್ಡಾಯ!

- Advertisement -
- Advertisement -

ಉತ್ತರಪ್ರದೇಶ: ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ವೈದ್ಯರು 10 ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲೇಬೇಕು. ಇಲ್ಲದಿದ್ರೆ ಒಂದು ಕೋಟಿ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಅಂತ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಸ ಕಾನೂನು ಜಾರಿ ಮಾಡಿದ್ದಾರೆ.

ಪ್ರಾವಿನ್ಶಿಯಲ್ ಮೆಡಿಕಲ್ ಆ್ಯಂಡ್​ ಹೆಲ್ತ್​​ ಸರ್ವೀಸಸ್​​ನಲ್ಲಿ ತಜ್ಞ ವೈದ್ಯರ ಕೊರತೆಯನ್ನ ನೀಗಿಸಲು ಈ ನಿರ್ಧಾರ ಮಾಡಲಾಗಿದೆ. ಪಿಜಿ ವ್ಯಾಸಂಗಕ್ಕೆ ಮುಂದಾಗುವ ವೈದ್ಯರು ತಮ್ಮ ಕೋರ್ಸ್​ ಮುಕ್ತಾಯವಾದ ಬಳಿಕ ಪ್ರಾಥಮಿಕ ಕೇಡರ್​ಗೆ ಮರಳುವುದಾಗಿ ಲಿಖಿತ ವಾಗ್ದಾನ ನೀಡಬೇಕು. 10 ವರ್ಷ ಸರ್ಕಾರಿ ನೌಕರಿ ಮಾಡಬೇಕು. ಒಂದು ವೇಳೆ ವೈದ್ಯರು ನೌಕರಿಯನ್ನು ಮಧ್ಯದಲ್ಲಿಯೇ ತೊರೆದರೆ, 1 ಕೋಟಿ ರೂ. ದಂಡ ಪಾವತಿಸಬೇಕು ಎಂದು ಆದೇಶಿಸಲಾಗಿದೆ.

- Advertisement -

Related news

error: Content is protected !!