Sunday, July 26, 2026
spot_imgspot_img
spot_imgspot_img

ವಿಟ್ಲ: ಶೊಕಾ ಮಾತೆ ಇಗರ್ಜಿಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರಿಸ್ಮಸ್ ಸೌಹಾರ್ದ ಉಡುಗೊರೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ ಶೊಕಾ ಮಾತೆಯ ಇಗರ್ಜಿಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರಿಸ್ಮಸ್ ಸೌಹಾರ್ದ ಉಡುಗೊರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ನ 22 ಪೌರ ಕಾರ್ಮಿಕರಿಗೆ ಮತ್ತು ಒಂದು ಬಡ ಕುಟುಂಬಕ್ಕೆ ದಿನಸಿ ಆಹಾರ ಕಿಟ್ ನೀಡಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಚರ್ಚ್ ಧರ್ಮ ಗುರುಗಳಾದ ಐವನ್ ಮೈಕಲ್ ರೋಡ್ರಿಗಸ್, ಕೆಥೋಲಿಕ್ ಸಭಾ ವಿಟ್ಲ ಘಟಕದ ಅಧ್ಯಕ್ಷ ಲೂವಿಸ್ ಮಸ್ಕರೇನಸ್ , ಕಾರ್ಯದರ್ಶಿ ತೋಮಸ್ ಪಾಯಿಸ್, ನಿಕಟ ಪೂರ್ವ ಅಧ್ಯಕ್ಷೆ ಜೆಸಿಂತಾ ಫೆರ್ನಾಂಡಿಸ್, ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಿಜಯ್ ಪಾಯಿಸ್, ಕಾರ್ಯದರ್ಶಿ ಶ್ವೇತಾ ಪಾಯಿಸ್, ಆಯೋಗದ ಸಂಯೋಜಕ ರಾಬರ್ಟ್ ಮಸ್ಕರೇನಸ್ ಮತ್ತು ವಿಟ್ಲ ಚರ್ಚ್ ಅಧೀನಕ್ಕೆ ಒಳಪಟ್ಟ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ಮನೋಹರ ಲ್ಯಾನ್ಸಿ ಡಿ ಸೋಜ ಕಾರ್ಯಕ್ರಮ ಸಂಯೋಜಿಸಿದರು.

- Advertisement -

Related news

error: Content is protected !!