ಒಕ್ಕೂಟದ ನೂತನ ಅಧ್ಯಕ್ಷರಾಗಿ ಪ್ರವೀಣ್ ಪೂಜಾರಿ ಸಣ್ಣಗುತ್ತು ಆಯ್ಕೆ

ಅಳಿಕೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಳಿಕೆ ವಲಯದ ತ್ರೈಮಾಸಿಕ ಸಭೆಯನ್ನು ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಇವರ ಸಹಯೋಗದೊಂದಿಗೆ 39 ವಿಧ್ಯಾರ್ಥಿಯವರಿಗೆ ಉಚಿತವಾಗಿ ಶಾಲಾಪುಸ್ತಕವನ್ನು ವಿತರಣೆ ಮಾಡಿ ಇದರಿಂದ ಬಡಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿವರ್ಷವೂ ಉಚಿತ ಪುಸ್ತಕ ವಿತರಣೆ ಮಾಡುತ್ತಾ ಬಂದಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ರವೀಶ್,ಅಳಿಕೆ ವಲಯದ ಮೇಲ್ವಿಚಾರಕಿ ಮೀನಾಕ್ಷಿ, ಅಳಿಕೆ ಗ್ರಾಮ ನಿಕಟಪೂರ್ವ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೃಷಿಕರಾದ ಮೋಹನ್ ಶೆಟ್ಟಿ, ಸೇವಪ್ರತಿನಿಧಿ ಚಂದ್ರಾವತಿ, ಒಕ್ಕೂಟದ ಎಲ್ಲಾ ಪದಾಧಿಕಾರಿಯವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ತ್ರೈಮಾಸಿಕ ನಡೆಸಿ ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಯವರನ್ನು ಬದಲಾವಣೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷರಾಗಿ ಪ್ರವೀಣ್ ಪೂಜಾರಿ ಸಣ್ಣಗುತ್ತು ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವಪ್ಪ ನಾಯ್ಕ್. ಕಾರ್ಯದರ್ಶಿ ಶ್ರೀಮತಿ ವಸಂತಿ .ಜೊತೆ ಕಾರ್ಯದರ್ಶಿ ಗಿರೀಶ್ ಮಡಿಯಾಲ ಕೋಶಾಧಿಕಾರಿ ಸೌಮ್ಯಲತಾ ಏರುಂಬು ಆಯ್ಕೆಯಾದರು.. ಈ ಕಾರ್ಯಕ್ರಮವನ್ನು ಕವಿತರವರು ನಿರ್ವಹಿಸಿ ಪ್ರವೀಣ್ ಸಣ್ಣಗುತ್ತು ಸ್ವಾಗತಿಸಿದರು.ಮೇಲ್ವಿಚಾರಕೀಯದ ಮೀನಾಕ್ಷಿಯವರು ವಂದಿಸಿದರು








