Sunday, July 19, 2026
spot_imgspot_img
spot_imgspot_img

ಉಡುಪಿ: ಹಿರಿಯ ಮದ್ದಳೆವಾದಕ ಹೃದಯಾಘಾತದಿಂದ ನಿಧನ

- Advertisement -
- Advertisement -

ಉಡುಪಿ: ಬಡಗು ತಿಟ್ಟಿನ ಪ್ರಸಿದ್ದ ಹಿರಿಯ ಮದ್ದಳೆವಾದಕ ಕರ್ಕಿ ಪ್ರಭಾಕರ ಪಾಂಡುರಂಗ ಭಂಡಾರಿ(83) ಶನಿವಾರ ಹೃದಯಾಘಾತದಿಂದ ನಿಧನರಾದರು. ತಂದೆ ಪಾಂಡುರಂಗ ಭಂಡಾರಿಯವರಲ್ಲಿ ಯಕ್ಷಗಾನ ಹಿಮ್ಮೇಳವಾದನ ಕಲಿತು ಹದಿನಾಲ್ಕರ ಹರೆಯದಲ್ಲೇ ಮೇಳ ಸೇರಿ ಗುಂಡಬಾಳ, ಕುಮಟಾ, ಅಮೃತೇಶ್ವರೀ, ಕೊಳಗಿಬೀಸ್, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಾಲ ಕಲಾಸೇವೆ ಮಾಡಿದ್ದರು.

ನೆಲ್ಲೂರು ಮತ್ತು ಕಪ್ಪೆಕೆರೆಯವರ ಭಾಗವತಿಕೆಯಲ್ಲಿ ,ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆಯಂಥ ಯಕ್ಷ ದಿಗ್ಗಜರನ್ನು ಕುಣಿಸಿದ ಹಿರಿಮೆ ಇವರದ್ದು. ರಂಗದಲ್ಲಿ ಮತ್ತು ಹೊರಗಡೆಯೂ ತನ್ನ ಸಾತ್ವಿಕ, ಶಿಸ್ತಿನ ನಡವಳಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರು ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರಿ, ಮೂವರು ಪುತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

- Advertisement -

Related news

error: Content is protected !!