- Advertisement -
- Advertisement -





ಬಂಟ್ವಾಳ : ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317-ಡಿಯ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಬಂಟ್ವಾಳ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಸಂಪರ್ಕ ಅಧಿಕಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸುದರ್ಶನ್ ಪಡಿಯಾರ್ ವಿಟ್ಲ ಇವರನ್ನು ಕ್ಲಬ್ ಅಧ್ಯಕ್ಷ ರೋಹಿತಾಕ್ಷ ಅಧ್ಯಕ್ಷತೆಯಲ್ಲಿ ಜಿಲ್ಲಾ ಗವರ್ನರ್ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ಕೋಶ ಅಧಿಕಾರಿ ಬಾಲಕೃಷ್ಣ ಹೆಗಡೆ ಕ್ಲಬ್ ನ ಕಾರ್ಯದರ್ಶಿ ದಿವ್ಯ ಶೆಟ್ಟಿ ಕೋಶಾಧಿಕಾರಿ ರಾಮಕೃಷ್ಣರಾವ್ ಪ್ರಾಂತೀಯ ಅಧ್ಯಕ್ಷರು ವಲಯ ಅಧ್ಯಕ್ಷರು ಮಾಜಿ ರಾಜ್ಯಪಾಲರುಗಳು ವಿವಿಧ ಕ್ಲಬ್ಬಿನ ಪದಾಧಿಕಾರಿಗಳು ಹಾಜರಿದ್ದರು ಮಾಜಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ ಉಪಸ್ಥಿತರಿದ್ದರು
- Advertisement -








