Friday, July 24, 2026
spot_imgspot_img
spot_imgspot_img

ಜನವರಿ 10ರಂದು ಮಂಗಳೂರು ನಗರದಲ್ಲಿ ಸಂಚಾರ ವ್ಯತ್ಯಯ – ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಸೂಚನೆ

- Advertisement -
- Advertisement -
ಸಾಂದರ್ಭಿಕ ಚಿತ್ರ

ಮಂಗಳೂರು: ಜ.10ರಂದು ಸಂಜೆ ಗಣ್ಯರು ಮಂಗಳೂರು ಅತ್ತಾವರದಲ್ಲಿರುವ ಹೋಟೆಲ್ ಅವಾತಾರ್‌ನಲ್ಲಿ ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಾಮ ಸಮಾವೇಶ, ಪಿಲಿಕುಲದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ, ಹಾಗೂ ನರಿಂಗಾನ ಮತ್ತು ಅಂಬ್ಲಮೊಗರು ಪ್ರದೇಶಗಳಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ಮಾರ್ಗಗಳಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಬಹುದು.


ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಕೆಳಕಂಡ ಮಾರ್ಗಗಳನ್ನು ಬಳಸದೆ ಬದಲಿ ಮಾರ್ಗಗಳನ್ನು ಉಪಯೋಗಿಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ.


ಸಂಚಾರ ದಟ್ಟಣೆ ಸಂಭವಿಸುವ ಮಾರ್ಗಗಳು:
ಕೆಂಜಾರು ಜಂಕ್ಷನ್ – ಮರವೂರು – ಕಾವೂರು – ಬೋಂದೆಲ್ – ಪದವಿನಂಗಡಿ – ಮೇರಿಹಿಲ್ – ಯೆಯ್ಯಾಡಿ – ಕೆ.ಪಿ.ಟಿ ವೃತ್ತ – ಬಟ್ಟಗುಡ್ಡೆ – ಕದ್ರಿ ಕಂಬಳ – ಭಾರತ್ ಬೀಡಿ ಜಂಕ್ಷನ್ – ಬಂಟ್ಸ್ ಹಾಸ್ಟೆಲ್ – ಪಿ.ವಿ.ಎಸ್ – ನವಭಾರತ್ ವೃತ್ತ – ಡಾ. ಅಂಬೇಡ್ಕರ್ ಜಂಕ್ಷನ್ – ಹಂಪನ್ ಕಟ್ಟೆ – ಕೈರಾಲಿ ಜಂಕ್ಷನ್ – ಅತ್ತಾವರ ಕಟ್ಟೆ – ಅವತಾರ್ ಹೋಟೆಲ್ ಎದುರಿನ ರಸ್ತೆ.


ಪದವು ಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ಎಕ್ಕೂರು – ಜಪ್ಪಿನಮೊಗರು – ಕಲ್ಲಾಪು – ತೊಕ್ಕೊಟ್ಟು – ಕುತ್ತಾರ್ ಪದವು – ದೇರಳಕಟ್ಟೆ – ನಾಟೆಕಲ್ – ಮಂಗಳಾಂತಿ – ಕಲ್ಕಟ – ಮಂಜನಾಡಿ – ನರಿಂಗಾನ.


ಕುತ್ತಾರ್ ಪದವು – ಕೊರಗಜ್ಜನಕಟ್ಟೆ – ಉಳಿಯ – ಅಂಬ್ಲಮೊಗರು – ಮದಕ ಜಂಕ್ಷನ್.


ಕೆ.ಪಿ.ಟಿ ಜಂಕ್ಷನ್ – ಕೊಟ್ಟಾರಚೌಕಿ – ಕೊಡಿಕಲ್ ಕ್ರಾಸ್ – ಕೂಳೂರು – ಕೆಐಒಸಿಎಲ್ ಜಂಕ್ಷನ್ – ತಣ್ಣೀರುಬಾವಿ – ಬ್ಲೂ ಫ್ಲ್ಯಾಗ್ ಬೀಚ್.


ಮುಖ್ಯ ಸೂಚನೆಗಳು:
ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
ಸಾರ್ವಜನಿಕರು ಸಂಚರಿಸುವ ಮಾರ್ಗಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅನುಮತಿ ಇರುವುದಿಲ್ಲ.
ಆದ್ದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!