- Advertisement -
- Advertisement -





ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಕ್ಷ ದೀಪೋತ್ಸವದಂದು, ಬಿಲ್ಲವ ಸಂಘ ವಿಟ್ಲ, ಮಹಿಳಾ ಬಿಲ್ಲವ ಘಟಕ ಮತ್ತು ಯುವವಾಹಿನಿ ವಿಟ್ಲ ಘಟಕ ಶಿವಗಿರಿ ಪೊನ್ನೋಟು ಇವರ 3ನೇ ವರ್ಷದ ಕಲಾಕಾಣಿಕೆ, ಕಾಪು ರಂಗ ತರಂಗ ಕಲಾವಿದರಿಂದ “ಶೋಬಾಜಿ” ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.




ಈ ಕಾರ್ಯಕ್ರಮವನ್ನು ಬಂಗಾರು ಅರಸರು ವಿಟ್ಲ ಅರಮನೆ ಇವರು ಉದ್ಘಾಟಿಸಿದರು. ಕೃಷ್ಣಯ್ಯ ಕೆ ವಿಟ್ಲ ಅರಮನೆ, ವಿಟ್ಲ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಬ್ರಹ್ಮಶ್ರೀ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಸುರಕ್ಷಾ ಹೆಲ್ತ್ ಸೆಂಟರಿನ ಡಾ. ಗೀತಪ್ರಕಾಶ್, ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ ಎಸ್ ಕಟ್ಟೆ ಗೌರವಾಧ್ಯಕ್ಷ ಸಂಜೀವ ಪೂಜಾರಿ ಗಜಾನನ ಇವರು ಉಪಸ್ಥಿತರಿದ್ದರು. ಹರೀಶ್ ಕೆ ಕಾರ್ಯಕ್ರಮ ಸಂಯೋಜಿಸಿದರು.
- Advertisement -







